ಶಿಕಾರಿಪುರ ಗಲಾಟೆಯಲ್ಲಿ ರೌಡಿ ಶೀಟರ್ – ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ…
ಶಿಕಾರಿಪುರದ ನಿನ್ನೆಯ ಘಟನೆಯಲ್ಲಿ ಕೆಲವರು ರೌಡಿಶೀಟರ್ ಗಳು ಇದ್ದಾರೆ. ಇದೊಂದು ರಾಜಕೀಯ ಪ್ರೇರಿತ ಗಲಾಟೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಿನ್ನೆ ಘಟನೆಯಲ್ಲಿ ಪೊಲೀಸರು ತಾಳ್ಮೆಯನ್ನು ಮೆರೆದಿದ್ದಾರೆ ಕೆಳಸ್ತರದ ಸಮಾಜ ಬಂಜಾರ ಸಮಾಜ ವಾಗಿದೆ. ಆ ಹಿನ್ನೆಲೆಯಲ್ಲಿ ಆ ಸಮುದಾಯದ ಮೇಲೆ ಏಕಾಏಕಿ ಲಾಟಿ ಉಪಯೋಗಿಸಬಾರದು ಎಂಬ ಕಾರಣಕ್ಕೆ ತಾಳ್ಮೆ ಕಳೆದುಕೊಳ್ಳಲಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪೊಲೀಸರು ನೋವನ್ನೆಲ್ಲ ತಾವೇ ಉಂಡು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಮೂವರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ಕಾನೂನನ್ನು ಯಾರು ಕೈಗೆ ಎತ್ತಿಕೊಳ್ಳಬಾರದು ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ ಆದರೆ ಕೆಲವೇ ಕೆಲವು ವ್ಯಕ್ತಿಗಳು ಮಾಡಿದ ಪಿತೂರಿಯಿಂದ ಪರಿಸ್ಥಿತಿ ಕೈ ಮೀರಿ ಹೋಗಿದೆ ಪೊಲೀಸರು ಎಲ್ಲಾ ಕ್ರಮವನ್ನು ಕೈಗೊಂಡರು ನೆನ್ನೆ ಈ ಒಂದು ಘಟನೆ ನಡೆದಿದೆ ನೆನ್ನೆ ನಡೆದ ಘಟನೆಯಲ್ಲಿ ಯಡಿಯೂರಪ್ಪನವರ ನಿವಾಸಕ್ಕೆ ಕಲ್ಲು ತೂರಿದ್ದಾರೆ.
ಬಣಜಾರ ಸಮುದಾಯದ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿರುವ ಯಡಿಯೂರಪ್ಪ ಆ ಸಮಾಜಕ್ಕೆ ಸಾಕಷ್ಟು ನೆರವನ್ನು ನೀಡಿದ್ದಾರೆ ಇಂಥ ಸಂದರ್ಭದಲ್ಲಿ ಕೆಲವು ಕಿಡಿಗೋಡಿಗಳು ನಿನ್ನೆ ಅವರ ಮನೆ ಮೇಲೆ ಕಲ್ಲುತೊರಿದ್ದಾರೆ ಇನ್ನು ಮೇಲಾದರೂ ಎಲ್ಲರೂ ಶಾಂತಿಯುತವಾಗಿರಬೇಕು ಯಾರೇ ಕಾನೂನನ್ನು ಕೈಗೆತ್ತಿಕೊಂಡರು ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
shikaripura : Rowdy sheeter in Shikaripura riot – Home Minister Araga Gyanendra’s statement…