Shikhar Dhawan : ಐಪಿಎಲ್ ಗೆ ಧನ್ಯವಾದ ಎಂದ ಗಬ್ಬರ್
ವೆಸ್ಟ್ ಇಂಡೀಸ್ ಪ್ರವಾಸದ ಭಾಗವಾಗಿ ಟೀಂ ಇಂಡಿಯಾ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಪೋರ್ಟ್ ಆಫ್ ಸ್ಪೇಯಿನ್ ಅಂಗಳದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎರಡು ವಿಕೆಟ್ ಗಳಿಂದ ಜಯ ಸಾಧಿಸಿದೆ.
ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಈ ಗೆಲುವಿನ ಬಗ್ಗೆ ಟೀಂ ಇಂಡಿಯಾದ ನಾಯಕ ಶಿಖರ್ ಧವನ್ ಸ್ಪಂದಿಸಿದ್ದು, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್ ಮೇಲೆ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.
ಈ ಮೂವರು ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು ಅಂತಾ ಧವನ್ ಕೊಂಡಾಡಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, 311 ರನ್ ಗಳಿಸಿತ್ತು.
ವೆಸ್ಟ್ ಇಂಡೀಸ್ ತಂಡ ನಿಗದತ 50 ಓವರ್ ಗಳಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 311 ರನ್ ಗಳಿಸಿತ್ತು.
ವಿಂಡೀಸ್ ಪರ ಓಪನರ್ ಹೋಪ್ 115 ರನ್, ಕ್ಯಾಪ್ಟನ್ ನಿಕೋಲಸ್ ಪೂರನ್ 74 ರನ್ ಗಳಿಸಿದ್ರು.
ಪಂದ್ಯ ಗೆಲ್ಲಲು 312 ರನ್ ಗಳ ಗುರಿಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ 49.4 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಭಾರತದ ಪರ ಶ್ರೇಯಸ್ ಅಯ್ಯರ್ 63, ಅಕ್ಷರ್ ಪಟೇಲ್ 64, ಸಂಜು ಸ್ಯಾಮ್ಸನ್ 54 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ರು.
ಈ ಹಿನ್ನೆಲೆಯಲ್ಲಿ ಧವನ್ ಮಾತನಾಡಿ, ನಿಜವಾಗಿಯೂ ಇದು ಅದ್ಭುತ ಗೆಲುವು. ಹುಡುಗರು ಎಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಕೊನೆಯವರೆಗೂ ಹೋರಾಟ ನಡೆಸಿದ ರೀತಿ ಅದ್ಭತವಾಗಿದೆ.
ಅಯ್ಯರ್, ಸಂಜೂ, ಅಕ್ಷರ್ ಎಲ್ಲರೂ ಅತ್ಯದ್ಭುತವಾಗಿ ಆಡಿದ್ರು. ಪಾದಾರ್ಪಣೆ ಪಂದ್ಯದಲ್ಲಿಯೇ ಆವೇಶ್ ಖಾನ್, ತಂಡಕ್ಕೆ ಅವಶ್ಯಕತೆಯಾದ ಸಂದರ್ಭದಲ್ಲಿ 10 ರನ್ ಗಳಿಸಿದ್ರು.
ನಿಜಹೇಳಬೇಕೆಂದ್ರೆ ಐಪಿಎಲ್ ಗೆ ಧನ್ಯವಾದ ಹೇಳಬೇಕು. ಅಂತಹ ದೊಡ್ಡ ಟೂರ್ನಿಯಲ್ಲಿ ಆಡಿದ ಕಾರಣ ಯಾವುದೇ ಭಯವಿಲ್ಲದೇ, ಇಲ್ಲೂ ಕೂಡ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹೇಳಿದ್ರು.
ಇನ್ನು ವಿಂಡೀಸ್ ಆಟಗಾರರ ಹೋಪ್, ಪೂರನ್ ಕೂಡ ಅದ್ಭುತವಾಗಿ ಆಡಿದ್ರು ಎಂದ ಧವನ್, ಭಾರತದ ಪರ ಶುಭ್ ಮನ್ ಗಿಲ್, ಶ್ರೇಯಸ್ಸ್ ಅಯ್ಯರ್, ಸ್ಯಾಮ್ ಸನ್ ಉತ್ತಮ ಜೊತೆಯಾಟವನ್ನು ನೀಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.








