ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣ: ಪತಿ ಬಂಧನದಿಂದ ಶಿಲ್ಪಾ ಶೆಟ್ಟಿ ಹೊಸ ಸಿನಿಮಾಗೆ ಭರ್ಜರಿ ಪ್ರಚಾರ..!
ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದು, ರಾಜ್ ಕುಂದ್ರ ಪೋರ್ನ್ ವಿಡಿಯೋಗಳ ಕುರಿತಾಗಿ ಮಾಡಿದ್ದ ಹಳೆಯ ಟ್ವೀಟ್ ಗಳು ವೈರಲ್ ಆಗ್ತಿವೆ.. ಕೆಲವೊಬ್ರು ರಾಜ್ ಕುಂದ್ರಾ ಪರ ನಿಂತಿದ್ದಾರೆ. ಈ ನಡುವೆ ರಾಜ್ ಕುಂದ್ರ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತ ಇದ್ದಾರೆ. ಆದ್ರೆ ಪತಿಯ ಬಂಧನದ ನಂತರ ಇಲ್ಲಿಯವರೆಗೂ ಮೌನ ವಹಿಸಿದ್ದ ಶಿಲ್ಪಾ ಶೆಟ್ಟಿ ಇದೀಗ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ರಾಜ್ ಕುಂದ್ರಾ ಪ್ರಕರಣದ ಪ್ರಮುಖ ಆರೋಪಿಯಾ ಆಗಿದ್ರು ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಬಾಗಿತ್ವ ಇಲ್ಲ.. ಅವರ ವಿರುದ್ಧ ಯಾವುದೇ ರೀತಿಯಾದ ಸಾಕ್ಷ್ಯ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.. ಆದ್ರೂ ಸೋಷಿಯಲ್ ಮೀಡಿಯಾಗಳಲ್ಲಿ ಶಿಲ್ಪಾ ಶೆಟ್ಟಿ ಟ್ರೋಲ್ ಆಗ್ತಾಯಿದ್ದಾರೆ.. ಇನ್ನೂ ಗಮನಿಸಲೇಬೇಕಾದ ವಿಚಾರ ಅಂದ್ರೆ ಶಿಲ್ಪಾ ಶೆಟ್ಟಿ ನಟನೆಯ ‘ಹಂಗಾಮ 2’ ಸಿನಿಮಾ OTTಯಲ್ಲಿ ಇಂದೇ ರಿಲೀಸ್ ಆಗ್ತಿದೆ.. ಆದ್ರೆ ನೆಟ್ಟಿಗರು ಈ ವಿಚಾರವಾಗಿ ಶಿಲ್ಪಾ ಶೆಟ್ಟಿ ಅವರನ್ನ ಭಾರೀ ಟ್ರೋಲ್ ಮಾಡ್ತಿದ್ದಾರೆ.. ಪತಿ ರಾಜ್ ಕುಂದ್ರಾ ಅರೆಸ್ಟ್ ಆಗಿ ಪತ್ನಿಯ ಸಿನಿಮಾವನ್ನ ಭರ್ಜರಿಯಾಗಿ ಪ್ರಚಾರ ಮಾಡ್ತಾಯಿದ್ದಾರೆ ಎಂದೆಲ್ಲಾ ನೆಟ್ಟಿಗರು ಟೀಕಿಸುತ್ತಿದ್ದಾರೆ..
ಪರೇಶ್ ರಾವಲ್ ಮತ್ತು ಮೀಜಾನ್ ಜಾಫ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪರೇಶ್ ರಾವಲ್‌ಗೆ ಜೋಡಿಯಾಗಿ ಶಿಲ್ಪಾ ಶೆಟ್ಟಿ ಹಾಗು ಮೀಜಾನ್‌ಗೆ ಜೋಡಿಯಾಗಿ ಪ್ರಣಿತಾ ಅಭಿನಯಿಸಿದ್ದಾರೆ. ಹಾಗಂತ ಕೇವಲ ಶಿಲ್ಪಾ ವಿರುದ್ಧವಷ್ಟೇ ಕಮೆಂಟ್ ಗಳು ಬರುತ್ತಿಲ್ಲ. ಕೆಲ ನೆಟ್ಟಿಗರು ಶಿಲ್ಪಾ ಶೆಟ್ಟಿಗೆ ಫುಲ್ ಆನ್ ಸಪೋರ್ಟ್ ಮಾಡ್ತಾಯಿದ್ದು, ನಟಿಯ ಪರವಾಗಿ ಬೆಂಬಲಕ್ಕೆ ನಿಂತಿದ್ದಾರೆ. ಆಕೆಯ ಪತಿ ತಪ್ಪು ಮಾಡಿದ್ರೆ, ಶಿಲ್ಪಾರನ್ನು ಏಕೆ ಟಾರ್ಗೆಟ್ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ..








