ರೋಬೋಟಿಕ್ ಆನೆ: ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ರಂಭಾಪುರಿ ಮಠಕ್ಕೆ ಒಂದು ಅತ್ಯಾಧುನಿಕ ರೋಬೋಟಿಕ್ ಆನೆಯನ್ನು ದಾನ ಮಾಡಿದ್ದಾರೆ.
ಉದ್ಘಾಟನೆ: ರಂಭಾಪುರಿ ಶ್ರೀ ವೀರ ಸೋಮೇಶ್ವರ ಜಗದ್ಗುರುಗಳು ಈ ರೋಬೋಟಿಕ್ ಆನೆಯನ್ನು ಉದ್ಘಾಟಿಸಿ ಮಠಕ್ಕೆ ಸ್ವಾಗತಿಸಿದ್ದಾರೆ.
ಭಕ್ತರ ಆಕರ್ಷಣೆ: ಈ ರೋಬೋಟಿಕ್ ಆನೆ ಭಕ್ತರನ್ನು ಆಶೀರ್ವದಿಸುವ ಕಾರ್ಯವನ್ನು ನಿರ್ವಹಿಸಲಿದೆ. ಮಠದ ಆವರಣದಲ್ಲಿ ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಭಕ್ತರ ಸಂತಸ: ನೂರಾರು ಭಕ್ತರು ಈ ರೋಬೋಟಿಕ್ ಆನೆಯ ದರ್ಶನ ಪಡೆದು ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟಿದ್ದಾರೆ.
ಈ ರೋಬೋಟಿಕ್ ಆನೆ ತುಂಬಾ ನೈಜವಾಗಿ ಕಾಣುತ್ತದೆ ಮತ್ತು ಜೀವಂತ ಆನೆಯಂತೆಯೇ ಚಲಿಸುತ್ತದೆ.ಮಠದ ಆವರಣದಲ್ಲಿ ಈ ರೋಬೋಟಿಕ್ ಆನೆಗೆ ವಿಶೇಷವಾದ ಕಟ್ಟಡವನ್ನು ನಿರ್ಮಿಸಲಾಗಿದೆ.