ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣ : ಕುಂದ್ರಾ ವಿರುದ್ಧ ಮತ್ತೊಂದು ಶಾಕಿಂಗ್ ವಿಚಾರ ಬಹಿರಂಗ..!
ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದು, ರಾಜ್ ಕುಂದ್ರ ಪೋರ್ನ್ ವಿಡಿಯೋಗಳ ಕುರಿತಾಗಿ ಮಾಡಿದ್ದ ಹಳೆಯ ಟ್ವೀಟ್ ಗಳು ವೈರಲ್ ಆಗ್ತಿವೆ.. ಕೆಲವೊಬ್ರು ರಾಜ್ ಕುಂದ್ರಾ ಪರ ನಿಂತಿದ್ದಾರೆ. ಈ ನಡುವೆ ರಾಜ್ ಕುಂದ್ರ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತ ಇದ್ದಾರೆ.
ಈ ನಡುವೆ ಒಂದೊಂದೇ ಶಾಕಿಂಗ್ ವಿಚಾರಗಳು ಬಹಿರಂಗವಾಗ್ತಿದೆ.. ರಾಜ್ ಕುಂದ್ರಾ ಬಂಧನದಿಂದ ತಪ್ಪಿಸಿಕೊಳ್ಳಲು ಸುಮಾರು 25 ಲಕ್ಷ ರೂಪಾಯಿ ವರೆಗೆ ಪೊಲೀಸರಿಗೆ ಲಂಚ ನೀಡಿದ್ರೂ, ಪೋರ್ನ್ ವಿಡಿಯೋಗಳ ಲೈ ಸ್ಟ್ರೀಮಿಂಗ್ ಗೆ ಪ್ಲಾನಿಂಗ್ ನಡೆಸಿದ್ರೂ ಎಂಬೆಲ್ಲಾ ವಿಚಾರ ಬಹಿರಂಗವಾಗ್ತಿದೆ.. ಇದೀಗ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ.. ರಾಜ್ ಕುಂದ್ರಾ ಅವರ ಮುಂಬೈನ ಅಂಧೇರಿಯಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿದಾಗ 100ಕ್ಕೂ ಹೆಚ್ಚು ನೀಲಿ ಚಿತ್ರಗಳ ಸಂಗ್ರಹ ಸೇರಿದಂತೆ ಭಾರೀ ದಾಖಲೆ ಸಂಗ್ರಹಿಸಿದೆ ಎಂದು ಹೇಳಲಾಗಿದೆ.
ಕಾಂಟ್ರವರ್ಸಿ ಕ್ವೀನ್ ಪೂನಂ ಪಾಂಡೆ ಕೂಡ ರಾಜ್ ಕುಂದ್ರಾ ವಿರುದ್ಧ ಸಾಲು ಸಾಲು ಆರೋಪಗಳನ್ನ ಹೊರಿಸಿ ಪಾರ್ನ್ ವಿಡಿಯೋಗಳ ಮಾಸ್ಟರ್ ಮೈಂಡ್ ಅಂತ ಕರೆದಿದ್ದಾರೆ.. ನನ್ನನ್ನ ಅಡಲ್ಟ್ ಸಿನಿಮಾ ಇಂಡಸ್ಟ್ರಿಗೆ ನೂಕಿದ್ದು ಕುಂದ್ರಾ ಅಂತ ಆರೋಪಿಸಿದ್ದಾರೆ.. ನಟಿ ಶರ್ಲಿನ್ ಕೂಡ ಕುಂದ್ರಾ ವಿರುದ್ಧ ಇದೇ ಆರೋಪ ಮಾಡಿದ್ದಾರೆ..
ಅಲ್ಲದೇ ಯೂಟ್ಯೂಬ್ ಸ್ಟಾರ್ ಪುನೀತ್ ಕೌರ್ ಕೂಡ ರಾಜ್ ಕುಂದ್ರಾ ಅಶ್ಲೀಲ ವಿಡಿಯೋದಲ್ಲಿ ನಟಿಸುವಂತೆ ನೇರ ಸಂದೇಶ ಕಳುಹಿಸಿದ್ದರು ಎಂದು ಆರೋಪ ಮಾಡಿದ್ದಾರೆ.. ಇದೆಲ್ಲದರ ನಡುವೆ ಮಾಡೆಲ್ ಗೆಹನಾ ರಾಜ್ ಕುಂದ್ರಗೆ ಸಪೋರ್ಟ್ ಮಾಡುತ್ತಾ ಇದು ಅಶ್ಲೀಲ ವಿಡಿಯೋ ಅಲ್ಲ ಬೋಲ್ಡ್ ವಿಡಿಯೋಗಳು . ಎರಿಯೋಟಿಕ್ ವಿಡಿಯೋಗಳನ್ನ ಪಾರ್ನ್ ವಿಡಿಯೋಗಳ ಜೊತೆಗೆ ಸೇರಿಸಬೇಡಿ. ನಾನು ಅವರ ನಿರ್ಮಾಣದ 3 ಸಿನಿಮಾಗಳಲ್ಲಿ ನಟಿಸಿದ್ದೇನೆ.. ಅವರು ನನಗೆ ಬಲವಂತ ಮಾಡಿಲ್ಲ ಎಂದು ಬೆಂಬಲಿಸಿದ್ದಾರೆ.. ಅಲ್ದೇ ಪೂನಂ ಇಂಡಿಯಾ ಗೆದ್ರೆ ಬೆತ್ತಲಾಗುತ್ತೇನೆ ಎಂಬ ಹೇಳಿಕೆ ನೀಡಿದ್ದು ಕುಂದ್ರಾ ಮಾತು ಕೇಳಿನಾ ಅಂತ ಪ್ರಶ್ನಿಸಿ ಕಿಡಿಕಾರಿದ್ದಾರೆ..
ನೀಲಿ ಚಿತ್ರಗಳ ತಯಾರಿ, ಸಂಗ್ರಹ ಹಾಗೂ ಪ್ರಸಾರಕ್ಕೆ ಸಂಬಂಧಿಸಿದ ಸರ್ವರ್, ಕಂಪ್ಯೂಟರ್ ಡಾಟಾ, 2019ರಿಂದಲೇ ರಾಜ್ ಕುಂದ್ರಾ ನೀಲಿ ಚಿತ್ರಗಳ ನಿರ್ಮಾಣ ಆರಂಭಿಸಿದ್ದು, ಇದರಿಂದ ಕೋಟ್ಯಂತರ ರೂಪಾಯಿ ಆದಾಯ ಗಳಿಸಿದ್ದಾರೆ ಎಂದು ಪೊಲೀಸರು ಮೂಲಗಳು ತಿಳಿಸಿವೆ.








