ಪತಿ ರಾಜ್ ಜೈಲಲ್ಲಿ… ಬಂಧನದ ಭೀತಿಯಲ್ಲಿ ಶಿಲ್ಪಾ ಶೆಟ್ಟಿ.. ಪೊಲೀಸರಿಂದ ಸಮನ್ಸ್ ಜಾರಿ..!
ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬ್ಲೂ ಫಿಲ್ಮಂ ಕೇಸ್ ನಲ್ಲಿ ಜೈಲಿನಲ್ಲಿ ದಿನಗಳೆಯುತ್ತಿದ್ದಾರೆ.. ಮತ್ತೊಂದೆಡೆ ಟ್ರೋಲಿಗರ ಕಾಟಕ್ಕೆ ಶಿಲ್ಪಾ ಶೆಟ್ಟಿ ಕಣ್ಣೀರಿಟ್ಟಿದ್ರೆ, ತಂಗಿ ಶಮಿತಾ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ.. ಶಿಲ್ಪಾ ಶೆಟ್ಟಿ ಹಾಗೂ ತಾಯಿ ವಿರುದ್ಧ ವಂಚನೆ ಕೇಸ್ ದಾಖಲಾಗಿದ್ದು, ಲಖನೌ ಪೊಲೀಸರು ಶಿಲ್ಪಾಗೆ ಸಮನ್ಸ್ ಜಾರಿಮಾಡಿದ್ದಾರೆ.. ಇತ್ತ ಇತ್ತೀಚೆಗಷ್ಟೇ ರಾಜ್ ಕುಂದ್ರಾ ಜಾಮೀನು ನಿರಾಕರಿಸಿತ್ತು ನ್ಯಾಯಾಲಯ. ಇದರ ಬೆನ್ನಲ್ಲೇ ಮತ್ತೊಂದು ಸಂಕಷ್ಟ ರಾಜ್ ಕುಂದ್ರಾಗೆ ಎದುರಾಗಿದೆ.. ಹೀಗಾಗಿ ಅಪಾಯದ ಮುನ್ಸೂಚನೆಯ ಬೆನ್ನಲ್ಲೇ ನಿರೀಕ್ಷಿಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
2020ರಲ್ಲಿ ಸೈಬರ್ ಪೊಲೀಸರು ದಾಖಲಿಸಿದ ಪ್ರಕರಣ ಸಂಬಂಧ ರಾಜ್ ಕುಂದ್ರ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಕುಂದ್ರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮುಂಬೈ ಅಪರಾಧ ವಿಭಾಗದ ಪೊಲೀಸರು ಬ್ಲೂ ಫಿಲ್ಮಂ ನಿರ್ಮಾಣದ ಆರೋಪದ ಮೇರೆಗೆ ರಾಜ್ ಕುಂದ್ರ ಅವರನ್ನು ಜುಲೈ 19ರಂದು ಬಂಧಿಸಿದ್ದರು. ಇದೀಗ ಶಿಲ್ಪಾ ಶೆಟ್ಟಿಗೆ ಹೊಸ ತಲೆ ನೋವು ಶುರುವಾಗಿದೆ. ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹಾಗೂ ತಾಯಿ ವಿರುದ್ಧ ಕೇಸ್ ದಾಖಲಾಗಿದ್ದು, ಲಕ್ನೋ ಪೊಲೀಸರು ನಟಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ಲಕ್ನೋ ಪೊಲೀಸ್ ಆಯುಕ್ತ ಡಿಕೆ ಠಾಕೂರ್ ಬಹಿರಂಗ ಪಡಿಸಿದ್ದಾರೆ. ಲಕ್ನೋ ಮೂಲದ ವ್ಯಕ್ತಿಯೊಬ್ಬ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪ ದೂರು ದಾಖಸಿದ್ದರು.
ಬ್ಲೂ ಫಿಲ್ಮಂ ದಂಧೆ : ರಾಜ್ ಕುಂದ್ರಾಗೆ ಎದುರಾಯ್ತು ಮತ್ತೊಂದು ಸಂಕಷ್ಟ..! ಇತ್ತ ಪತ್ನಿ ಶಿಲ್ಪಾ ಶೆಟ್ಟಿಗೂ ಬಂಧನದ ಭೀತಿ..!
ಶಿಲ್ಪಾ ಶೆಟ್ಟಿ ಒಡೆತನದ್ದು ಎಂದು ಹೇಳಲಾಗುತ್ತಿರುವ ವೆಲ್ನೆಸ್ ಸೆಂಟರ್ ಹೆಸರಿನಲ್ಲಿ ವಂಚನೆ ಪ್ರಕರಣ ದಡಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ ವಿರುದ್ಧ ಲಕ್ನೋದ ಹಜರತ್ ಗಂಜ್ ಮತ್ತು ವಿಭೂತಿ ಖಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಈ ಬಗ್ಗೆ ಶಿಲ್ಪಾ ಶೆಟ್ಟಿ ವಿಚಾರಣೆ ನಡೆಸಲು ಸಮನ್ಸ್ ಜಾರಿ ಮಾಡಿದೆ. ಶಿಲ್ಪಾ ಶೆಟ್ಟಿ ವೆಲ್ನೆಸ್ ಸೆಂಟರ್ ನ ಅಧ್ಯಕ್ಷೆ ಕೂಡ ಆಗಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಅಲ್ಲದೇ ಕಂಪನಿಯನ್ನು ತೆರೆಯುವ ಹೆಸರಿನಲ್ಲಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಅವರು ಕೋಟ್ಯಾಂತರ ರೂಪಾಯಿಗಳನ್ನು ಪಡೆದು ಮೋಸ ಮಾಡಿದ್ದಾರೆ ಎಂದು ಓಮ್ಯಾಕ್ಸ್ ಹೈಟ್ ನಿವಾಸಿ ಜ್ಯೋತ್ಸ್ನಾ ಚೌಹಾಣ್ ಮತ್ತು ರೋಹಿತ್ ವೀರ್ ಸಿಂಗ್ ದೂರು ದಾಖಲಿಸಿದ್ದರು. ಇದೇ ವಿಚಾರವಾಗಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.








