ಬೆಂಗಳೂರು: ರಾಜ್ಯದ ಮಲೆನಾಡಿನ ಜಿಲ್ಲೆಗಳು, ಮಧ್ಯ ಕರ್ನಾಟಕದ ರಾತ್ರಿ ಭಾರೀ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಕಂಪಿಸಿರುವುದರ ಜತೆ ಐದಾರೂ ಸೆಕೆಂಡುಗಳ ಕಾಲ ಶಬ್ದ ಬಂದಿದೆ.


ರಾತ್ರಿ 10.21 ರಿಂದ 10.23ರವರೆಗೆ ಭೂಮಿ ಕಂಪಿಸಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು, ಪಾತ್ರೆಗಳು ಕೆಳಗೆ ಬಿದ್ದಿದ್ದು, ಕಿಟಕಿಗಳು ಗೋಡೆಗೆ ಹೊಡೆದುಕೊಂಡ ಪರಿಣಾಮ ಗಾಜುಗಳು ಪುಡಿ ಪುಡಿಯಾಗಿವೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಪ್ರಮಾಣದ ಶಬ್ದ ಕೇಳಿ ಬಂದಿದೆ. ಶಿವಮೊಗ್ಗ ನಗರ, ಸಾಗರ, ಹೊಸನಗರ, ತೀರ್ಥಹಳ್ಳಿ, ಭದ್ರಾವತಿ ತಾಲೂಕಿನಾದ್ಯಂತ ಭೂಮಿ ಕಂಪಿಸಿದ ಅನುಭವದ ಜತೆಗೆ ಭಾರಿ ಸದ್ದು ಕೇಳಿ ಬಂದಿದೆ. ಕೆಲ ಕಡೆ ಮನೆಯಲ್ಲಿ ವಸ್ತಗಳು ಅಲುಗಾಡಿ ಕೆಳಗೆ ಬಿದ್ದಿವೆ. ಭಾರಿ ಪ್ರಮಾಣದ ಸ್ಫೋಟ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದವರು ಹೊರಗೋಡಿ ಬಂದಿದ್ದಾರೆ.

ಶಿವಮೊಗ್ಗದಲ್ಲಿ 15 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದೆ. ಶಿವಮೊಗ್ಗದ ಅಬ್ಬಲಗೆರೆ ಭೂಕಂಪ ಮಾಪನ ಕೇಂದ್ರದಲ್ಲಿ ಕಂಪನದ ತೀವ್ರತೆ 1.5ರಷ್ಟು ದಾಖಲಾಗಿದೆ. ಹೀಗಾಗಿ ಶಿವಮೊಗ್ಗ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಭದ್ರಾವತಿ, ಹೊಸನಗರ ತಾಲೂಕಿನಲ್ಲಿ ಅತಂಕದಲ್ಲಿ ಜನತೆ ರಾತ್ರಿ ಕಳೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪನದ ಅನುಭವದ ಜತೆಗೆ ಭಾರಿ ಶಬ್ದ ಕೇಳಿ ಬಂದಿದ್ದು, ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ.


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಎನ್.ಆರ್ ಪುರ, ಕೊಪ್ಪ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಮಿ ಒಳಗಿಂದ ಭಾರಿ ಪ್ರಮಾಣದಲ್ಲಿ ಶಬ್ಧ ಕೇಳಿ ಬಂದಿದೆ. ರಾತ್ರಿ 10.21 ರಿಂದ 10.23ರವರೆಗೆ ಭಾರಿ ಶಬ್ದ ಕೇಳಿ ಬಂದಿದೆ.
ದಾವಣಗೆರೆ ಜಿಲ್ಲೆಯ ಚೀಳೂರು, ಚನ್ನಗಿರಿ ತಾಲೂಕಿನಲ್ಲೂ ಭೂಮಿ ಕಂಪಿಸಿದ ಅನುಭವ ಹಾಗೂ ಭಾರಿ ಸದ್ದು ಕೇಳಿ ಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








