ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಹುಣಸೋಡಿನ ಜಲ್ಲಿ ಕ್ರಷರ್‍ನಲ್ಲಿ ನಡೆದ ಜಿಲೆಟಿನ್ ಸ್ಫೋಟದ ತನಿಖೆ ಚುರುಕುಗೊಂಡಿದೆ. ಜಲ್ಲಿ ಕ್ರಷರ್ ಮಾಲೀಕ ಹಾಗೂ ಜೆಡಿಎಸ್ ಮುಖಂಡ ಸುಧಾಕರ್‍ನನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಕ್ರಷರ್‍ಗೆ ಜಿಲೆಟಿನ್ ಹಾಗೂ ಡೈನಮೈಟ್ ಸರಬರಾಜು ಮಾಡುತ್ತಿದ್ದ ನರಸಿಂಹ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕಲ್ಲು ಗಣಿಗಾರಿಕೆಗೆ ಭೂಮಿ ಕೊಟ್ಟಿದ್ದ ಮಾಲೀಕ ಅನಿಲ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶಿವಮೊಗ್ಗದ ರವೀಂದ್ರ ನಗರದ ನಿವಾಸಿ ಸುಧಾಕರ್ ಒಡೆತನದ ಬಿವಿಎಸ್ ಸ್ಟೋನ್ ಕ್ರಷರ್‍ನಲ್ಲಿ ಕಳೆದ ರಾತ್ರಿ ಲಾರಿಯಲ್ಲಿದ್ದ 50 ಡೈನಮೈಟ್‍ಗಳು ಸ್ಫೋಟಗೊಂಡು 8 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವು ಕಾರ್ಮಿಕರು ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಚಿವ ಈಶ್ವರಪ್ಪ, ಗಣಿ ಅಧಿಕಾರಿಗಳ ಭೇಟಿ
ಸ್ಫೋಟ ಸಂಭವಿಸಿದ ಜಲ್ಲಿ ಕ್ರಷರ್ ಪ್ರದೇಶಕ್ಕೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಲೈಸೆನ್ಸ್ ಅವಧಿ ಮುಗಿದಿದ್ದರೂ ಗಣಿಗಾರಿಕೆ ನಡೆಸಲಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕ್ರಷರ್‍ನಲ್ಲಿ ಜಿಲೆಟಿನ್ ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಜನರು ಆತಂಕದಲ್ಲಿದ್ದಾರೆ.
ಐದು ಜಿಲ್ಲೆಗಳನ್ನು ನಡುಗಿಸಿದ್ದ ಸ್ಫೋಟ
ಕಳೆದ ರಾತ್ರಿ 10.20ರ ಸುಮಾರಿಗೆ ಕ್ರಷರ್‍ನಲ್ಲಿ ಸಂಭವಿಸಿದ ಡೈನಮೈಟ್ ಸ್ಫೋಟದಿಂದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಭೂಮಿ ಕಂಪಿಸಿದ ಅನುಭವದ ಜತೆಗೆ ಭಾರಿ ಶಬ್ದ ಕೇಳಿಸಿತ್ತು. ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಶಿವಮೊಗ್ಗದ ಕೆಲ ರಸ್ತೆಗಳಲ್ಲಿ ಬಿರುಕು ಬಿಟ್ಟಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








