ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ , ಕೊಲೆಯ ಹಿಂದೆ ಕೇರಳದ ಪಿಎಫ್ಐ ಕೈವಾಡ ಶಂಕೆ ವ್ಯಕ್ತವಾಗಿದೆ.. ಹಲವು ದಿನಗಳಿಂದ ಹರ್ಷನ ಕೊಲೆಗೆ ಹಂತಕರು ಸಂಚು ರೂಪಿಸಿದ್ದರು ಎನ್ನಲಾಗಿದೆ.. ಈ ಹಂತಕರು ಬೆಂಗಳೂರಿನಲ್ಲೂ ನಾಲ್ವರ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಸದ್ಯ ಬೆಂಗಳೂರು ಪೊಲೀಸ್ರಿಂದಲೂ ತನಿಖೆ ಆರಂಭವಾಗಿದೆ. ಇತ್ತ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸರು ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..
ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನಲೆ , ಹೆಚ್ಚವರಿ ಭದ್ರತೆಗೆ ಬೆಂಗಳೂರು ಪೊಲೀಸರ ನಿಯೋಜನೆ ಮಾಡಲಾಗಿದೆ.
ಇನ್ಸ್ಪೆಕ್ಟರ್ , ಸಬ್ ಇನ್ಸ್ ಪೆಕ್ಟರ್ ಸೇರಿ 212 ಜನ ಪೊಲೀಸರನ್ನ ಭದ್ರತೆಗೆ ರವಾನೆ ಮಾಡಲಾಗಿದೆ.. ತಕ್ಷಣವೇ ಶಿವಮೊಗ್ಗಕ್ಕೆ ಹೊರಡುವಂತೆ ಆದೇಶ ನೀಡಲಾಗಿದೆ.
ಈ ಹಿಂದೆ ಶಿವಮೊಗ್ಗ ಭಾಗದಲ್ಲಿ ಕೆಲಸ ಮಾಡಿದ್ದ ಪೊಲೀಸ್ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.. ಸಂಜೆ ವೇಳೆ ಪರಿಸ್ಥಿತಿ ನೋಡಿಕೊಂಡು ಮತ್ತಷ್ಟು ಪೊಲೀಸರು ನಿಯೋಜನೆ ಸಾಧ್ಯತೆ ಇದೆ.. ಪೊಲೀಸ್ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ..








