ಶಿವಮೊಗ್ಗ: ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತುಂಗಾ ನದಿ ತುಂಬಿ ಹರಿಯುತ್ತಿದ್ದು, ನೆರೆ ಭೀತಿ ಎದುರಾಗಿದೆ. ಅದ್ರಲ್ಲೂ ಶಿವಮೊಗ್ಗದಲ್ಲಿ ತಡರಾತ್ರಿ ಭಾರೀ ಮಳೆಯಾಗಿದ್ದು, ವರುಣ ಶಾಂತನಾಗುವ ಲಕ್ಷಣ ಕಾಣಿಸುತ್ತಿಲ್ಲ. ಬಿಟ್ಟು ಬಿಡದೇ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಜನರು ಹೈರಾಣಾಗಿದ್ದಾರೆ. ಮಲೆನಾಡಿನ ಹೆಬ್ಬಾಗಿಲು ಮಲೆನಾಡಿನ ತವರೂರು ಮಲೆನಾಡಿನ ಮಡಿಲು ಎಂದೇ ಕರೆಸಿಕೊಳ್ಳುವ ಗಾಜನೂರು ಡ್ಯಾಂ ತುಂಬಿ ಹೋಗಿದೆ. ತುಂಗೆಯ ಅಡ್ಡಲಾಗಿ ಕಟ್ಟಲಾಗಿರುವ ಗಾಜನೂರು ಡ್ಯಾಂನಿಂದ 66 ಸಾವಿರ ಕ್ಯೂಸೆಸ್ ನೀರು ಹೊರಗೆ ಬಿಡುಗಡೆ ಮಾಡಲಾಗಿದೆ. ಭದ್ರೆಯ ಅಡ್ಡಲಾಗಿ ಕಟ್ಟಲಾಗಿರುವ ಭದ್ರಾ ಡ್ಯಾಂನಿಂದ ಎರಡು ಸಾವಿರಕ್ಕೂ ಹೆಚ್ಚು ಕ್ಯೂಸೆಸ್ ನೀರು ಹೊರಗೆ ಬಿಡಲಾಗಿದ್ದು, ಹೀಗೆ ಮಹಾಮಳೆ ಮುಂದುವರೆದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆಯಿದ್ದು, ವರುಣನ ರೌದ್ರನರ್ತನಕ್ಕೆ ಮಲೆನಾಡಿನ ಜನ ಬೆಚ್ಚಿಬಿದ್ದಿದ್ದಾರೆ.
ಇನ್ನೂ ತುಂಗಾಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ನೆಲೆಸಿರುವ ಜನರನ್ನು ಸ್ಥಳಾಂತರಗೊಳಿಸಲು ಜಿಲ್ಲಾಡಳಿತ ಸಜ್ಜಾಗಿದೆ. ತಾಲ್ಲೂಕು ಆಡಳಿತ ನೇತೃತ್ವ ವಹಿಸಿಕೊಂಡಿರುವ ಎನ್ ಜೆ ನಾಗರಾಜ್ ಖಡಕ್ ಆದೇಶ ಹೊರಡಿಸಿದ್ದಾರೆ. ನೆರೆ ಬಂದಿದ್ದೇ ಯಾದಲ್ಲಿ ನೆರೆ ಸಂತ್ರಸ್ತರಿಗೆ ರಕ್ಷಣಾ ಕೇಂದ್ರ ನಿರ್ವಹಣೆ ಮಾಡುವಂತೆ ಯೂ ಆದೇಶ ಹೊರಡಿಸಿದ್ದಾರೆ. ಯಾವುದೇ ಅತಿವೃಷ್ಟಿ ನೆರೆ ಬಾರದಂತೆ ಕ್ರಮ ಕೈಗೊಳ್ಳಲು ಶಿವಮೊಗ್ಗ ಜಿಲ್ಲಾಧಿಕಾರಿ ಕೆಬಿ ಶಿವಕುಮಾರ್ ಸಿದ್ದತೆ ಸಿದ್ಧತೆ ನಡಡೆಸಿಕೊಂಡಿದ್ದಾರೆ. ನೆರೆ ಪರಿಸ್ಥಿತಿ ಬಗ್ಗೆಯೂ ಜಿಲ್ಲಾಧಿಕಾರಿಗಳು ಕ್ಷಣಕ್ಷಣಕ್ಕೂ ಮಾಹಿತಿ ಪಡೆಯುತ್ತಿದ್ದಾರೆ. ಇನ್ನೂ ನಗರದಲ್ಲಿ ಈಗಾಗಲೇ 3 ಕಡೆ ರಕ್ಷಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರಕೃತಿ ವಿರುದ್ಧವಾಗಿ ನಾವು ನಡೆಯಲು ಸಾಧ್ಯವಿಲ್ಲ ಸಾರ್ವಜನಿಕರು ಧೈರ್ಯಗೆಡಬೇಡಿ ಭದ್ರತಾ ವ್ಯವಸ್ಥೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಜನರಿಗೆ ಧೈರ್ಯ ತುಂಬಿದ್ದಾರೆ. ಇದೇ ವೇಳೆ ಜಿಲ್ಲೆಯ ನೆರೆ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿಗಳು ಸಾಗರ ತಾಲ್ಲೂಕಿನ ವರದಾ ನದಿ ಹೊರತುಪಡಿಸಿ ಜಿಲ್ಲೆಯ ಬೇರ್ಯಾವ ನದಿ ಅಪಾಯ ಮಟ್ಟ ಮೀರಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಎಸ್ ಪಿ ಶಾಂತ್ ಕುಮಾರ್ ಅವರು ಜಿಲ್ಲಾಧಿಕಾರಿಗಳ ಆದೇಶದಂತೆ ನದಿ ಪಾತ್ರದಲ್ಲಿ ಸಾರ್ವಜನಿಕರು ಬಾರದಂತೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದಾರೆ. ಇಲ್ಲಿಯ ತನಕ ಮಳೆಯಿಂದಾಗಿ ಮೂವತ್ತು ಮನೆ ಹಾನಿಯಾಗಿದ್ದು, ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ ಹಾಗು ಮರಗಳು ಉರುಳಿದ್ದು, ಸಣ್ಣಪುಟ್ಟ ಗುಡ್ಡ ಕುಸಿದ ಮಾಹಿತಿ ಬಂದಿದೆ,ಇದನ್ನು ಹೊರತುಪಡಿಸಿ ನಮ್ಮ ಜಿಲ್ಲೆಯಲ್ಲಿ ಬೇರೆ ಯಾವ ದೊಡ್ಡ ಹಾನಿ ಆಗಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಒಳ್ಳೆದಾ ಅಥವಾ ಕೆಟ್ಟದಾ.?? ಹಾಗಾದರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...








