ಶಿವಮೊಗ್ಗ : ಮಲೆನಾಡಿನಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಮಳೆ ಅಬ್ಬರಕ್ಕೆ ಮನೆ ಕಳೆದುಕೊಂಡು , ಜಮೀನು ಹಾನಿಗೊಳಗಾಗಿ, ಬೆಳೆ ಕಳೆದುಕೊಂಡ, ರೈತರು, ಜನರ ಸ್ಥಿತಿ ಹೇಳತೀರದಂತಾಗಿದೆ. ಇನ್ನೂವರೆಗೂ ವರುಣ ಶಾಂತನಾಗದೇ ಅಬ್ಬರ ಮುಂದುವರೆಸ್ಇದ್ದಾನೆ. ತೋಟದ ಮನೆಗಳು, ಜಮೀನು ಕಳೆದುಕೊಂಡ ರೈತರ ಗೋಳು ಕೇಳುವವರಿಲ್ಲ. ಇತ್ತ ಸಂಬಂಧಪಟ್ಟ ಅಧಿಕಾರಿಗಳು ಸಹ ಈ ಬಗ್ಗೆ ಗಮನವಹಿಸದೆ ನಿರ್ಲಕ್ಷ್ಯ ವಹಿಸಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.