ಶಿವಮೊಗ್ಗ : ಮತಾಂಧ ಜಿಹಾದಿ ಶಕ್ತಿಗಳಿಗೆ ದಿಕ್ಕಾರ ಘೋಷಣೆ ಕೂಗಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು-ಮುಖಂಡರು ಪ್ರತಿಭಟಿಸಿದ್ದಾರೆ.. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ..
ನೂಪೂರ್ ಶರ್ಮ ಮತ್ತು ಅವರ ಹೇಳಿಕೆ ಬೆಂಬಲಿಸಿ ಪ್ರತಿಭಟನೆ ನಡೆಸಿದ್ದಾರೆ.. ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರ ಹತ್ಯೆ ವಿರೋಧಿಸಿ ಮುಖಂಡರು ಮತ್ತು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ..
ನಗರದ ಹುಲಿಕೆರೆ ಶಾಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆದಿದೆ.. ಇಂದು ಕರಾಳ ದಿನವಾಗಿ ಬಿಜೆಪಿಗರು ಆಚರಿಸುತ್ತಿದ್ದಾರೆ. ದೇಶದಲ್ಲಿ ಇದು ಕೆಟ್ಟ ಘಟನೆ ನಡೆದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ..
ಜಿಹಾದಿಗಳು ಅಮಾಯಕ ಟೈಲರ್ ನೊಬ್ಬನ ಹತ್ಯೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.. ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದ್ದಾರೆ..








