ತುಮಕೂರು : ರಾಜ್ಯದಲ್ಲಿ ಉಪಚುನಾವಣಾ ಕಾವು ರಂಗೇರುತ್ತಿದೆ. ಶಿರಾ, ಆರ್ ಆರ್ ನಗರ ಉಪಚುನಾವಣೆಗೆ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿವೆ.
ಈ ಮಧ್ಯೆ ಬಿಗ್ ಬಾಸ್ ಸೀಜನ್-4 ರನ್ನರ್ ಅಪ್ ದಿವಾಕರ್ ಶಿರಾದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.
ಈ ಬಗ್ಗೆ ದಿವಾಕರ್ ಅವರೇ ಸ್ವತಃ ಮಾಹಿತಿ ನೀಡಿದ್ದು, ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ.
ಬಿಗ್ ಬಾಸ್ ಸ್ಪರ್ಧಿ ಎಂದು ಜನ ನನಗೆ ವೋಟ್ ಹಾಕುವುದು ಬೇಡ. ಸಾಮಾನ್ಯ ವ್ಯಕ್ತಿ ಎಂಬ ಭಾವನೆಯಿಂದ ನನಗೆ ಮತ ನೀಡಲಿ.
ಇದನ್ನೂ ಓದಿ : ಇದು 10% ಕಮಿಷನ್ ಸರ್ಕಾರ : ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಚುನಾವಣೆಯಲ್ಲಿ ನಿಲ್ಲುವುದು ನಿಜ. ಆದರೆ ಯಾವುದಾದರೂ ಪಕ್ಷದಿಂದ ಸ್ಪರ್ಧೆ ಮಾಡಬೇಕಾ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕಾ ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ.
ಒಂದು ವಾರದಲ್ಲಿ ಈ ಕುರಿತು ಸ್ಪಷ್ಟಪಡಿಸುತ್ತೇನೆ. ಇಲ್ಲಿಯವರೆಗೂ ಜನರು ನನಗೆ ಪ್ರೀತಿ ತೋರಿದ್ದಾರೆ. ನಾನು ಚುನಾವಣೆಗೆ ನಿಂತರೆ ಜನರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದಿದ್ದಾರೆ.








