ಮುಂಬೈ: ಮಹಾರಾಷ್ಟçದಲ್ಲಿ ಕೊರೊನಾ ಪ್ರಕರಣಗಳ ನಾಗಾಲೋಟ ಮುಂದುವರೆದ ಬೆನ್ನಲ್ಲೇ, ಅಲ್ಲಿನಸ ಸರ್ಕಾರದ ಆಡಳಿತ ಪಕ್ಷ ಶಿವಸೇನೆಗೂ ಕೊರೊನಾ ಕಂಟಕ ಎದುರಾಗಿದೆ.
ಶಿವಸೇನೆ ಕಾರ್ಯಕರ್ತರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮುಂಬೈನ ದಾದರ್‌ನಲ್ಲಿರುವ ಶಿವಸೇನಾ ಭವನವನ್ನು ಸೀಲ್‌ಡೌನ್ ಮಾಡಲಾಗಿದೆ.
ಸೀಲ್‌ಡೌನ್ ಮಾಡಿದ ನಂತರ ಶಿವಸೇನಾ ಕಚೇರಿಗೆ ಕ್ರಿಮಿನಾಶಕ ಸಿಂಪಡಿಸಿ ಸ್ಯಾನಿಟೈಸ್ ಮಾಡಲಾಗಿದೆ. ಯಾವ ಕಾರ್ಯಕರ್ತರು ಕೇಂದ್ರ ಕಚೇರಿಗೆ ಬರಬಾರದು. ಪಕ್ಷದ ಕೆಲಸವಿದ್ದರೆ ಮನೆಯಲ್ಲಿದ್ದುಕೊಂಡೇ ಮಾಡುವಂತೆ ಸೂಚನೆ ನೀಡಲಾಗಿದೆ.
ಮಹಾರಾಷ್ಟçದಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿದ್ದು, ಇಂದು ಸೋಂಕಿತರ ಸಂಖ್ಯೆ ೧ ಲಕ್ಷದ ೩೫ ಸಾವಿರಕ್ಕೆ ಏರಿಕೆಯಾಗಿದೆ. ಕೊರೊನಾಗೆ ೬೨೮೩ ಮಂದಿ ಮಹಾರಾಷ್ಟçದಲ್ಲಿ ಬಲಿಯಾಗಿದ್ದಾರೆ.
ಮಹಾರಾಷ್ಟçದಲ್ಲಿ ಕೊರೊನಾದಿಂದ ಮೃತಪಟ್ಟವರ ಡಾಟಾ ಮಿಸ್ಸಿಂಗ್ ಆಗಿದೆ ಎನ್ನಲಾಗುತ್ತಿದೆ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯನ್ನು ಬಚ್ಚಿಡಲು ಸರ್ಕಾರ ಹೊರಟಿದೆ ಎಂದು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನಿವಿಸ್ ಆರೋಪಿಸಿದ್ದಾರೆ.
ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ
ಏಪ್ರಿಲ್ 1 ರಿಂದ ದೇಶಾದ್ಯಂತ ಆದಾಯ ತೆರಿಗೆ ಇಲಾಖೆಯ ನಿಯಮಗಳಲ್ಲಿ ಭಾರಿ ಬದಲಾವಣೆ ತರಲಾಗಿದೆ. 64 ವರ್ಷಗಳ ಹಳೆಯ ಕಾನೂನಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು ಕಪ್ಪು ಹಣದ...








