ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಗ್ರಾಮ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವಂತೆ ಶಿವಸೇನೆ ಮತ್ತೆ ಕಿರಿಕ್ ಆರಂಭಿಸಿದೆ.
ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಬೇಗ ಮರು ಪ್ರತಿಷ್ಠಾಪನೆ ಮಾಡುವಂತೆ ಶಿವಸೇನೆ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿವಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಹಾರಾಷ್ಟ್ರದ ಗಡಿ ಗ್ರಾಮ ಕವಳೆಕಟ್ಟಿ ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ವಿಷಯ ತಿಳಿಸದ ಹುಕ್ಕೇರಿ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಕೊಲ್ಲಾಪುರದ ಶಿವಸೇನೆ ಕಾರ್ಯಕರ್ತರ ಮನವಿ ಸ್ವೀಕರಿಸಿ ವಿವಾದ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿ ಮರಳಿ ಕಳಿಸುವ ಪ್ರಯತ್ನ ನಡೆಸಿದ್ದಾರೆ.
ಈ ಮೂಲಕ ಶಿವಾಜಿ ಪ್ರತಿಮ ವಿಚಾರ ಮುಂದಿಟ್ಟುಕೊಂಡು ಗಡಿಯಲ್ಲಿ ಕಿರಿಕ್ ಮಾಡಲು ಯತ್ನಿಸಿದ ಶಿವಸೇನೆ ಕಾರ್ಯಕರ್ತರ ಯತ್ನವನ್ನು ಸದ್ಯಕ್ಕೆ ವಿಫಲಗೊಳಿಸಲಾಯಿತು.
ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆಯನ್ನು 15 ದಿನಗಳಲ್ಲಿ ಪ್ರತಿಷ್ಠಪಾನೆ ಮಾಡಲು ಸುತ್ತಮುತ್ತಲಿನ 3 ಗ್ರಾಮಗಳ ಗ್ರಾಮಸ್ಥರು ನಿರ್ಣಯ ಮಾಡಿದ್ದರು. ಆದರೆ, ಪ್ರತಿಮೆ ಪ್ರತಿಷ್ಠಾಪನೆ ವಿಳಂಬವಾದ ನೆಪವೊಡ್ಡಿ ಶಿವಸೇನೆ ಕಾರ್ಯಕರ್ತರು ಕೊಲ್ಲಾಪುರದಿಂದ ಕವಳೆಕಟ್ಟಿ ಗ್ರಾಮಕ್ಕೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಸಕಾಲಕ್ಕೆ ಹುಕ್ಕೇರಿ ತಹಶೀಲ್ದಾರ್ ಸ್ಥಳಕ್ಕೆ ತೆರಳಿದ್ದರಿಂದ ಶಿವಸೇನೆ ಕಿರಿಕ್ ಮಾಡಲು ಅವಕಾಶ ಸಿಗದೆ ವಾಪಸ್ಸಾಗಿದ್ದಾರೆ
₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು
ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ₹3.6 ಲಕ್ಷ ಕೋಟಿ ಮೌಲ್ಯದ ವಿವಿಧ ಯುದ್ಧ ಸಾಮಗ್ರಿಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ ನೀಡಿದೆ. ಇದರ...








