ಲಾಕ್ ಡೌನ್ ಗೆ ಜನ ಡೋಂಟ್ ಕೇರ್ – ಸಾಮಾಜಿಕ ಅಂತರವೂ ಇಲ್ಲ.. ಮಾಸ್ಕ್ ಇಲ್ಲ ಕೊರೊನಾ ಭಯವಿಲ್ಲ…
ಬೆಂಗಳೂರು : ದೇಶದಲ್ಲಿ ಕೋವಿಡ್ 2ನೇ ಅಲೆ ಭೀತಿಗೆ ಜನ ತತ್ತರಿಸಿ ಹೋಗಿದ್ದಾರೆ. ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ,ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಈ ನಡುವೆ ದೇಶದ , ಹಾಗೂ ರಾಜ್ಯ , ಬೆಂಗಳೂರಿನಲ್ಲೂ ಬ್ಲಾಕ್ ಫಂಗಸ್ ವೈರಸ್ ನ ಕಾಟ ಶುರುವಾಗಿದೆ.. ಇದ್ರಿಂದಾಗಿ ಈಗಾಗಲೇ ಹಲವು ಜೀವಗಳು ಹೋಗಿದವೆ. ಹೀಗಾಗಿ ಜನ ಮತ್ತಷ್ಟು ಆತಂಕ್ಕೆ ಒಳಗಾಗಿದ್ದಾರೆ.
ಮತ್ತೊಂದೆಡೆ ರಾಜ್ಯ ಸರ್ಕಾರ ೀ ಪರಿಸ್ಥಿತಿ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಿದೆ. ಆದ್ರೆ ಜನರು ಇದನ್ನ ಗಂಭೀರವಾಗಿ ತೆಗೆದುಕಲೊಂಡಿರುವಂತೆ ಕಾಣ್ತಿಲ್ಲ.. ಮಾಸ್ಕ್ ಹಾಕದೇ ಸುಖಾಸುಮ್ಮನೇ ಆಚೆ ಸುತ್ತಾಡುತ್ತಾ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತಹ ದೃಶ್ಯ ಶಿವಾಜಿನಗರದಲ್ಲಿ ಬೆಳಿಗ್ಗೆ ಕಂಡುಬಂದಿದೆ.. ಜನರು ಮಾಸ್ಕ್ ಸರಿಯಾಗಿ ಧರಿಸದೇ ಸಾಮಾಜಿಕ ಅಂತರವಿಲ್ಲದೆ ಬೇಕಾಬಿಟ್ಟಿ ಗುಂಪು ಗುಂಪಾಗಿ ಓಡಾಡಿದ್ದು ಕಂಡುಬಂದಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








