Shivakumar Swamiji : ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀ ಗಳ ನಾಲ್ಕನೇ ಪುಣ್ಯ ಸ್ಮರಣೆ….
ಇಂದು ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀ ಗಳ ನಾಲ್ಕನೇ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ಸಿದ್ದಗಂಗಾ ಮಠ ಹೂವಿನ ಅಲಂಕಾರ, ದೀಪಾಲಂಕಾರದಿಂದ ಕಂಗೋಳಿಸುತ್ತಿದೆ. ವಿಶೇಷವಾಗಿ ಶ್ರೀ ಗಳ ಗದ್ದುಗೆ ವಿವಿಧ ಹಣ್ಣುಗಳಿಂದ ಅಲಂಕಾರ ಮಾಡಲಾಗಿದೆ.
ಬೆಳಿಗ್ಗೆ 5 ಗಂಟೆಯಿಂದ ಶಿವಕುಮಾರ ಶ್ರೀ ಗಳ ಗದ್ದುಗೆ ಪೂಜೆ ಆರಂಭವಾಗಿದ್ದು, ಮಹಾರುದ್ರಾಭೀಷೇಕ, ರಾಜೋಪಚಾರ, ಬಿಲ್ವಾರ್ಚನೆ ಹಾಗೂ ಇತರೆ ವಿಶೇಷ ಪೂಜೆಗಳನ್ನ ನೆರವೇರಿಸಲಾಗುತ್ತಿದೆ. ಬೆಳ್ಳಿರಥದಲ್ಲಿ ಪೂಜ್ಯರ ಭಾವಚಿತ್ರವಿಟ್ಟು ಸಕಲ ಕಲಾ ತಂಡಗಳಿಂದ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆಯಲ್ಲಿ ಸಿದ್ದಗಂಗಾ ಪೀಠಾಧ್ಯಕ್ಷ ಸಿದ್ದಲಿಂಗ ಶ್ರೀ ಹಾಗೂ ವಿವಿಧ ಮಠಾಧಿಶರು ಭಾಗಿಯಾಗಲಿದ್ದಾರೆ.
ಸಿದ್ದಗಂಗಾ ಮಠದ ಶ್ರೀ ಗೋಸಲ ಸಿದ್ದೇಶ್ವರ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ಏರ್ಪಸಿಲಾಗಿದ್ದು, ಮಾಜಿ ಸಿಎಂ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮ ದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಹಲವು ಸಚಿವರು ಭಾಗಿಯಾಗಲಿದ್ದಾರೆ.
ಈ ವೇಳೆ ಲಕ್ಷಾಂತರ ಭಕ್ತರು ಮಠಕ್ಕೆ ಆಗಮಿಸುವ ನಿರೀಕ್ಷೆ ಹಿನ್ನಲೆಯಲ್ಲಿ ಬರುವ ಭಕ್ತರಿಗೆ ಒಟ್ಟು ಐದು ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಉಪಹಾರ ಹಾಗೂ ರಾತ್ರಿವರೆಗೂ ಊಟದ ವ್ಯವಸ್ಥೆ ಜೊತೆಗೆ ಸಿಹಿ ಬೂಂದಿ,ಕಾರ ಬೂಂದಿ ಪಾಯಸ,ಚಿತ್ರಾನ್ನ,ಅನ್ನ ಸಾಂಬಾರ್ ಮಜ್ಜಿಗೆ ಸೇರಿದಂತೆ ಹಲವು ಖಾದ್ಯ ತಯಾರು ಮಾಡಲಾಗಿದೆ. ಜೊತೆಗೆ ಮಠದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
Shivakumar Swamiji: Walking God Shri Shivakumar Swamiji on His Fourth Death Anniversary…