Shivamogga | ಹಿಜಬ್ ಗಲಾಟೆಗೂ ಹರ್ಷನ ಕೊಲೆಗೂ ಸಂಬಂಧ : ಮುತಾಲಿಕ್
ಬೆಂಗಳೂರು: ಹಿಜಬ್ ಗಲಾಟೆಗೂ ಹರ್ಷನ ಕೊಲೆಗೂ ಸಂಬಂಧ ಇದೆ.
ಎಸ್‍ಡಿಪಿಐ, ಪಿಎಫ್‍ಐ ಇಸ್ಲಾಂನ ದುಷ್ಟ ಶಕ್ತಿಗಳು ಈ ಕೊಲೆ ಹಿನ್ನೆಲೆಯ ಕಾರಣಕರ್ತರಾಗಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ.
ಹರ್ಷನನ್ನ ಆದರ್ಶವಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಹಿಂದೂ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಮುತಾಲಿಕ್, ಬಿಜೆಪಿ ಸರ್ಕಾರ ಹಿಂದೂ ಕಾರ್ಯಕರ್ತರ ಬಗ್ಗೆ ಅತ್ಯಂತ ನಿರ್ಲಕ್ಷ್ಯ ವಹಿಸಿದ್ದಾರೆ.
ಇವರಿಗೆ ಅಧಿಕಾರ ಬೇಕು, ಹಿಂದುತ್ವ ಮಾತನಾಡಬೇಕು ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.shivamogga-bajrang dal activist murder pramod muthalik reaction Saaksha Tv









