Shivamogga : ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ : ರೇಣುಕಾಚಾರ್ಯ
ಬಿಜೆಪಿ ಸರಕಾರವು ಸಮಾಜದಲ್ಲಿ ಸೌಹಾರ್ದ ಸ್ಥಾಪನೆಗೆ ಬದ್ಧವಾಗಿದೆ. ನಾಗರಿಕ ಸಮಾಜದಲ್ಲಿ ವಾದ-ವಿವಾದಗಳು ಸಹಜ. ಆದರೆ ಶಿವಮೊಗ್ಗದಲ್ಲಿ ನಡೆದಿರುವುದು ಬರ್ಬರ ಮತ್ತು ಅಮಾನವೀಯ ಘಟನೆಯಾಗಿದೆ ಎಂದು ರೇಣುಕಾಚಾರ್ಯ ಅವರು ಖಂಡಿಸಿದರು.
ಭಜರಂಗದಳ ಕಾರ್ಯಕರ್ತ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ರೇಣುಕಾರ್ಯರು ಸಾಂತ್ವಾನ ಹೇಳಿ 7.17 ಲಕ್ಷ ಚೆಕ್ ನೀಡಿದ್ದಾರೆ..
ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಘಟನೆ ನಡೆದ ಎರಡೇ ದಿನಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸಿದಂತೆ ಬಂಧಿತರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಲಿದೆ ಎಂದು ಎಚ್ಚರಿಕೆ ಕೊಟ್ಟರು.
ಸಮಾಜವಿರೋಧಿ ಶಕ್ತಿಗಳನ್ನು ಸರಕಾರವು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲಿದೆ. ಈ ಘಟನೆಯ ಹಿಂದೆ ಯಾರಾರಿದ್ದಾರೆ ಮತ್ತು ಯಾವ್ಯಾವ ಸಂಘಟನೆಗಳ ಕುಮ್ಮಕ್ಕಿದೆ ಎನ್ನುವುದನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.
ಇನ್ನೂ ಮೂಲಭೂತವಾದಿಗಳು ಹರ್ಷನಂತಹ ಒಬ್ಬ ಸೇವಾ ಮನೋಭಾವದ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದ್ದಾರೆ. ದುಷ್ಕರ್ಮಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗದಲ್ಲಿ ನಡೆದಿರುವ ಹೇಯ ಕೃತ್ಯವನ್ನು ಸಂವೇದನಾಶೀಲರೆಲ್ಲ ಖಂಡಿಸಬೇಕು ಎಂದು ಹೇಳಿದ್ದಾರೆ.