Bangalore | ಕರಗಕ್ಕೆ ಕೊರೊನಾ ಕಂಟಕ.. ಓದಿ ಪ್ರಮುಖ ಸುದ್ದಿ
ಶಿವಮೊಗ್ಗದಲ್ಲಿ ಬಜರಂಗದ ಕಾರ್ಯಕರ್ತನ ಕೊಲೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಂತಿ ಕಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿನ್ನೆ ರಾತ್ರಿ ಶಿವಮೊಗ್ಗದಲ್ಲಿ ಸಂಘಟನೆಯ ಕಾರ್ಯಕರ್ತ ಹರ್ಷ ಅವರ ಕೊಲೆಯಾಗಿರುವುದು ಮನಸ್ಸಿಗೆ ಬೇಸರವಾಗಿದೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಯುವಕನ ಹತ್ಯೆ ಅತ್ಯಂತ ಖಂಡನೀಯ. ಪೊಲೀಸರು ತಕ್ಷಣ ಹಂತಕರನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೈಯಕ್ತಿಕವಾಗಿ ನಿಗಾ ವಹಿಸಿ ಪ್ರಚೋದನಕಾರಿ ಚಟುವಟಿಕೆಗಳಿಗೆ ಅವಕಾಶ ನೀಡದೆ ಬಿಗಿಬಂದೋಬಸ್ತ್‌ಗೆ ವ್ಯವಸ್ಥೆ ಮಾಡಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು ಕರಗಕ್ಕೆ ಮತ್ತೊಮ್ಮೆ ಕೊರೊನಾ ಕಂಟಕ ಎದುರಾಗಿದೆ.. ಕೋವಿಡ್ ಹಿನ್ನೆಲೆ ಈ ಬಾರಿಯೂ ಸಾರ್ವಜನಿಕರಿಗೆ ಅವಕಾಶ ಸಿಗೋದು ಅನುಮಾನ ಎನ್ನಲಾಗ್ತಿದೆ. ಕರಗ, ಜಾತ್ರೆಗಳಲ್ಲಿ ಜನ ಸೇರೋದು ಸೂಕ್ತವಲ್ಲ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ. ಮೂರನೇ ಅಲೆ ಇನ್ನು ಮುಗಿಯದ ಹಿನ್ನೆಲೆ, ಜಾತ್ರೆಗಳಿಗೆ ಅವಕಾಶ ಕೊಡೋದು ಸೂಕ್ತವಲ್ಲ ಎಂಬ ಆಲೋಚನೆ ಹೊಂದಿದೆ.
ರಷ್ಮಿಕಾ ಮಂದಣ್ಣ ಪ್ರಸ್ತುತ ಒಂದು ಸಿನಿಮಾಗೆ 4 ರಿಂದ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ. ಒಂದು ಜಾಹೀರಾತಿಗೆ ಲಕ್ಷಗಳಿಂದ ಹಿಡಿದು ಕೋಟಿ ರುಪಾಯಿಯವರೆಗೂ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಹೀಗೆ ಈವರೆಗೂ ರಷ್ಮಿಕಾ ಸಂಪಾದಿಸಿ ನಿಖರ ಆಸ್ತಿಯ ಬೆಲೆ ಸುಮಾರು 37 ಕೋಟಿ ರೂಪಾಯಿಗಳು.
ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ತಂಡವು ತನ್ನ ಲೋಗೋವನ್ನು ಬಿಡುಗಡೆ ಮಾಡಿದೆ. ಹಾರುವ ಗಾಳಿಪಟದ ಆಕಾರದಲ್ಲಿ ಗುಜರಾತ್ ಟೈಟಾನ್ಸ್ ಲೋಗೋ ಇದೆ. ಗಾಳಿಪಟಗಳು ಗುಜರಾತಿನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಈ ಕಾರಣಕ್ಕೆ ಗುಜರಾತ್ ಗಾಳಿಪಟ ಆಕಾರದ ಲೋಗೋ ರೆಡಿ ಮಾಡಿದೆ.
shivamogga Siddaramaiah Basavaraja bommai film sports









