ವೆಬ್ ಸೀರೀಸ್ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ ಶಿವಣ್ಣ – ಪುತ್ರಿ ನಿವೇದಿತಾ ನಿರ್ಮಾಣ
ಕನ್ನಡ ಚಿತ್ರರಂಗದ ಯಂಗ್ & ಎನರ್ಜಿಟಿಕ್ ಹೋರೋ ಶಿವರಾಜ್ ಕುಮಾರ್ ಸದಾ ಕೈಯಲ್ಲಿ ಹಲವಾರು ಸಿನಿಮಾ ಆಫರ್ ಗಳನ್ನ ಇಟ್ಟುಕೊಂಡಿರುವ ಬ್ಯುಸಿ ನಟ. ಇಲ್ಲಿಯವರೆಗೆ ವಿಬಿನ್ನ ಪಾತ್ರಗಳಿಗೆ ವಿಭಿನ್ನ ವೇಷಗಳಿಗೆ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿರುತ್ತಾರೆ. ಅಂದಹಾಗೆ, ಶಿವಣ್ಣ ಈಗ ವೆಬ್ ಸೀರಿಸ್ ಲೋಕಕ್ಕೂ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.
ಈ ಕುರಿತು ಮಾತನಾಡಿದ ಶಿವಣ್ಣ ‘ನಾನು ವೆಬ್ ಸಿರೀಸ್ ಮಾಡ್ತಾ ಇದ್ದೇನೆ. ಅದನ್ನು ನನ್ನ ಮಗಳೇ ನಿರ್ಮಾಣ ಮಾಡಲಿದ್ದಾಳೆ’ ಎಂದು ಹೇಳಿದ್ದಾರೆ. ಈಗಾಗಲೇ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಹಲವು ವೆಬ್ ಸಿರೀಸ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ತಂದೆ ಜೊತೆಗೆ ಹೊಸ ವೆಬ್ ಸಿರೀಸ್ ಮಾಡಲು ಮುಂದಾಗಿದ್ದಾರೆ.
ಕನ್ನಡದ ಹೊಸ ಓಟಿಟಿ ಆ್ಯಪ್ “ಟಾಕೀಸ್” ಅನ್ನು ಲಾಂಚ್ ಮಾಡಿದ ನಂತರ ಮಾತನಾಡಿದ ಶಿವಣ್ಣ ‘ಕೋವಿಡ್ ಟೈಮ್‌ನಲ್ಲಿ ನಮಗೆ ವೆಬ್ ಸಿರೀಸ್ ಅಂದ್ರೆ ಏನು ಅನ್ನೋದು ಗೊತ್ತಾಯಿತು’. ಬೇರೆ ಬೇರೆ ಥರದ ಸಾಕಷ್ಟು ವೆಬ್ ಸಿರೀಸ್‌ಗಳನ್ನು ನೋಡಿ ನಾನು ಕೂಡ ಸಾಕಷ್ಟು ಕಲಿತಿದ್ದೇನೆ. ಕನ್ನಡದ ಕಂಟೆಂಟ್‌ನ ತಗೋಳೋದಕ್ಕೆ ಭಯ ಪಡ್ತಾರೆ. ಹಿಂದಿ, ತಮಿಳು, ತೆಲುಗು ಎಲ್ಲ ಭಾಷೆಯ ಕಂಟೆಂಟ್ ಹೋಗ್ತಿದೆ. ಆದರೆ ಕನ್ನಡದ ಕಂಟೆಂಟ್‌ನ ತೆಗೆದುಕೊಳ್ಳುವುದಕ್ಕೆ ಧೈರ್ಯ ಮಾಡ್ತಾ ಇರಲಿಲ್ಲ. ಈ ಟಾಕೀಸ್ ಟೀಮ್‌ನವರು ಆ ಧೈರ್ಯ ಮಾಡಿದ್ದಾರೆ’ ಎಂದು ಹೇಳಿದ್ದಾರೆ.
‘ನಮ್ಮ ಮಗಳು ವೆಬ್ ಸಿರೀಸ್ ನಿರ್ಮಾಣವನ್ನು ಶುರು ಮಾಡಿದ್ದಾಳೆ. ಶುರುವಾಗಿ ನಾಲ್ಕು ವರ್ಷ ಆಯ್ತು. ಈಗಾಗಲೇ ‘ಹೇಟ್ ಯೂ ರೊಮಿಯೋ’, ‘ಬೈ ಮಿಸ್ಟೇಕ್’, ‘ಹನಿಮೂನ್’ ಅಂತ ಮೂರು ವೆಬ್ ಸಿರೀಸ್ ಮಾಡಿದ್ದೇವೆ. ನಮ್ ಹತ್ರ ಇನ್ನೂ ಏಳು ಸ್ಟೋರಿ ಇದೆ. ಒಂದೇ ಸಲಕ್ಕೆ ಏಳು ವೆಬ್ ಸಿರೀಸ್ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ದೀವಿ ಎಂದು ಹೇಳಿದರು ಶಿವಣ್ಣ.
Shivanna – daughter Nivedita’s entry into the web series world