ಅಂಬರೀಷ್ ನಂತರ ಕನ್ನಡ ಚಿತ್ರರಂಗದ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹೊತ್ತುಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇದೀಗ ಕನ್ನಡ ಚಿತ್ರಂಗಲ್ಲಿ ಕೊರೊನಾ ಬಿಕ್ಕಟ್ಟಿನಿಂದ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಸಿಎಂ ಬಿ.ಎಸ್ ಯಡಿಯೂರಪ್ಪನವರೊಂದಿಗೆ ಚರ್ಚೆ ನಡೆಸಲು ಸಜ್ಜಾಗಿದ್ದಾರೆ. ಹೌದು ನಾಯಕತ್ವ ವಹಿಸಿಕೊಂಡ 2 ನೇ ದಿನಕ್ಕೆ ಈ ಬಗ್ಗೆ ಹಲವು ಸಿನಿ ಗಣ್ಯರು ಹಾಗೂ ಸಚಿವ ಸಿಟಿ ರವಿ ಅವರೊಂದಿಗೆ ಶಿವಣ್ಣ ತಮ್ಮ ಮನೆಯಲ್ಲಿ ಈ ಕುರಿತಾಗಿ ಚರ್ಚೆ ನಡೆಸಿದ್ದರು. ಇದೀಗ ಸ್ವತಃ ಸಿಎಂ ಜೊತೆಗೆ ಪ್ರಸ್ತುತ ಚಿತ್ರರಂಗದ ಸ್ಥಿತಿಗತಿ, ಚಿತ್ರೋದ್ಯಮಕ್ಕೆ ಸರ್ಕಾರದಿಂದ ಸಹಾಯ ಸೇರಿದಂತೆ ಕೆಲ ಮಹತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಸಲು ಶಿವಣ್ಣ ಮುಂದಾಗಿದ್ದಾರೆ. ಇದೇ ಮಂಗಳವಾರ ಅಂದ್ರೆ ಆಗಸ್ಟ್ 4 ರಂದು ಶಿವಣ್ಣ ಬಿಎಸ್ ವೈ ಅವರ ಅಧಿಕೃತ ಕಚೇರಿಯಲ್ಲಿ ಭೇಟಿ ಮಾಡಲಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ಅವರಿಗೆ ಚಿತ್ರರಂಗದ ಪ್ರಮುಖರು ಸಾಥ್ ನೀಡಲಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್: ನಿತೀಶ್ ರೆಡ್ಡಿ ಭರ್ಜರಿ ಶತಕ
ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ, ಟೀಮ್ ಇಂಡಿಯಾದ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿ...