ಪಡಿತರ ಚೀಟಿ ಇಲ್ಲದೇ ಇರುವವರಿಗೆ ಮಧ್ಯಪ್ರದೇಶದ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇತ್ತೀಚೆಗಷ್ಟೇ ತಾವು ಕೊಟ್ಟಿದ್ದ ಮಾತಿನಂತೇ ರಾಜ್ಯದ ಸರ್ಕಾರಿ ನೌಕರಿಗಳು ಕೇವಲ ರಾಜ್ಯದ ನಾಗರಿಕರಿಗಷ್ಟೇ ಸೀಮಿತಗೊಳಿಸುವ ನಿಯಮ ಜಾರಿ ಬಗ್ಗೆ ಘೋಷಣೆ ಮಾಡಿದ್ದರು.
ಇದೀಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಸರ್ಕಾರ ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಒಂದು ರೂಪಾಯಿಗೆ ಅಕ್ಕಿ, ಗೋಧಿ, ಉಪ್ಪು ಹಾಗೂ 1.5 ರೂಪಾಯಿಗೆ ಸೀಮೆಎಣ್ಣೆ ನೀಡುವ ಯೋಜನೆ ಜಾರಿಗೆ ತರಲು ಮುಂದಾಗಿದೆ. ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಒಂದು ರೂಪಾಯಿಗೆ ಅಕ್ಕಿ, ಗೋಧಿ, ಉಪ್ಪು ಹಾಗೂ 1.5 ರೂಪಾಯಿಗೆ ಸೀಮೆಎಣ್ಣೆ ನೀಡುವುದಾಗಿ ಘೋಷಿಸಿದ್ದಾರೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್.
ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ಬಡವರು ಮತ್ತು ಪಡಿತರ ಚೀಟಿ ಇಲ್ಲದವರಿಗೆ ಒಂದು ರೂಪಾಯಿಗೆ ಅಕ್ಕಿ, ಗೋಧಿ ಹಾಗೂ ಉಪ್ಪು ನೀಡಲಾಗುವ ಯೋಜನೆ ಇದೇ ಸೆಪ್ಟಂಬರ್ 1 ರಿಂದ ಜಾರಿಗೆ ಬರಲಿದೆ.









