ಸಭಾಪತಿ ಆಗದೇ ಇದ್ದರೆ ಯಾವ ದೇಶ ಮುಳುಗುತ್ತದೆ : ಹೊರಟ್ಟಿ ವಿರುದ್ಧ ಶಿವರಾಮೇಗೌಡ ಕಿಡಿ
ಬೆಂಗಳೂರು : ಬಸವರಾಜ ಹೊರಟ್ಟಿ ಸಭಾಪತಿ ಆಗದೇ ಇದ್ದರೆ ಯಾವ ದೇಶ ಮುಳುಗುತ್ತದೆ ಎಂದು ಬಸವರಾಜ್ ಹೊರಟ್ಟಿ ವಿರುದ್ಧ ಶಾಸಕ ಶಿವಲಿಂಗೇಗೌಡ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ.
ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಸಂಘಟನಾ ಸಭೆಯಲ್ಲಿ ಮಾತನಾಡಿದ ಶಿವರಾಮೇಗೌಡ ಅವರು, ಬಿಜೆಪಿ ಜೊತೆ ಜೆಡಿಎಸ್ ಸಾಫ್ಟ್ ಕಾರ್ನರ್ ಹೊಂದಿದೆ ಎಂಬ ಮಾತುಗಳು ರಾಜ್ಯದಲ್ಲಿ ಕೇಳಿಬರುತ್ತಿವೆ.
ಯಾವುದಾದರೂ ಒಂದು ನಿಲುವು ಇರಲಿ. ನಮ್ಮಲ್ಲಿ ದ್ವಂದ್ವ ನಿಲುವು ಬೇಡವೇ ಬೇಡ ಎಂದು ಬಹಿರಂಗವಾಗಿಯೇ ವರಿಷ್ಠರ ನಡೆಯನ್ನು ಟೀಕಿಸಿದ್ದಾರೆ.
ಇದೇ ವೇಳೆ ಬಸವರಾಜ್ ಹೊರಟ್ಟಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು ಬಿಜೆಪಿ ಜೊತೆ ಸಖ್ಯ ಬೆಳೆಸುತ್ತೇವೆ ಎಂದು ಯಾಕೆ ಹೇಳಬೇಕಾಗಿತ್ತು.
ಬಸವರಾಜ್ ಹೊರಟ್ಟಿ ಅವರಿಗೆ ಯಾರು ಸ್ವಾತಂತ್ರ್ಯ ಕೊಟ್ಟವರು? ಯಾಕೆ ಮೈತ್ರಿ ಅಂತಾ ಹೇಳಬೇಕಾಯ್ತು? ಎಂದು ಪ್ರಶ್ನಿಸಿದರು.
ದೊಡ್ಡಣ್ಣ ಕೈಗಾರಿಕಾ ಸಂಘದ ಕ್ಯಾಲೆಂಡರ್ ಬಿಡುಗಡೆ
ಅಲ್ಲದೆ ಹೊರಟ್ಟಿ ಸಭಾಪತಿ ಆಗದೇ ಇದ್ದರೆ ಯಾವ ದೇಶ ಮುಳುಗುತ್ತದೆ. ಯಾರದ್ದೋ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿ ಕೊಡಬಾರದು. ಬಿಜೆಪಿ ಜೊತೆ ಸಂಬಂಧ ಬೆಳೆಸಬಹುದು ಅಂತಾ ಹೊರಟ್ಟಿ ಯಾಕೆ ಹೇಳಬೇಕಿತ್ತು ಎಂದು ಗರಂ ಆದರು.
ಇದೇ ವೇಳೆ ಮೈತ್ರಿ ಸರ್ಕಾರ ಪತನ ಮತ್ತು ಸರ್ಕಾರದ ರಚನೆಗೂ ಮುನ್ನ ನಡೆದ ಮಾತುಕತೆಗಳ ಬಗ್ಗೆ ಮಾತನಾಡಿ, ನಾವು ಐದು ವರ್ಷ ಸಿಎಂ ಒಪ್ಪಿಕೊಳ್ಳಬಾರದಾಗಿತ್ತು.
ಎರಡೂವರೆ ವರ್ಷಕ್ಕೆ ಒಪ್ಪಿಕೊಳ್ಳಬೇಕಿತ್ತು ಅನಿಸುತ್ತದೆ. ಕುಮಾರಸ್ವಾಮಿ ಅವರ ಮೇಲೆ ಇಲ್ಲಸಲ್ಲದ ಅರೋಪ ಹೊರಿಸಿದರು. ಅದೇ ಕಾರಣಕ್ಕೆ ಹದಿನಾಲ್ಕು ತಿಂಗಳು ಮಾತ್ರ ಸಿಎಂ ಆಗಿ ಇರಬೇಕಾಯ್ತು ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









