shivrajsingh chouhan
ಮಧ್ಯಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ಐಟಂ ಎಂದು ಕರೆದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಈ ಹೇಳಿಕೆ ಖಂಡಿಸಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಸಂಸದ ಜ್ಯೋತಿರಾಧಿತ್ಯ ಸೇರಿದಂತೆ ಹಲವು ಮುಖಂಡರು ಉಪವಾಸ ಧರಣಿ ಕೈಗೊಂಡಿದ್ದಾರೆ.
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮಾರ್ ಮತ್ತು ಬಿಜೆಪಿ ಇತರೆ ಮುಖಂಡರು ಧರಣಿಯಲ್ಲಿ ಬಾಗಿಯಾಗಿದ್ದಾರೆ. ಭೂಪಾಲ್ ಮಿಂಟೋ ಹಾಲ್ ನಲ್ಲಿ ಬೆಳಗ್ಗೆ ಸಿಎಂ ಚೌಹಾಣ್, ಬಿಜೆಪಿಯ ರಾಜ್ಯಸಭಾ ಸದಸ್ಯ ಸಿಂಧಿಯಾ ಮತ್ತು ಲೋಕಸಭಾ ಸದಸ್ಯ ಶಂಕರ್ ಲಾಲ್ವಾನಿ ಮೌನ ಪ್ರತಿಭಟನೆ ನಡೆಸಿದರು.
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಮಧ್ಯಪ್ರದೇಶದ ಬಿಜೆಪಿ ಅಧ್ಯಕ್ಷ ವಿಷ್ಣು ದತ್ ಶರ್ಮಾ, ಪಕ್ಷದ ಹಿರಿಯ ಮುಖಂಡ ಪ್ರಭಾತ್ ಝಾ ಮತ್ತು ಇತರ ಕೆಲವು ನಾಯಕರು ಗ್ವಾಲಿಯರ್ನಲ್ಲಿ ಇದೇ ರೀತಿಯ ಪ್ರತಿಭಟನೆ ನಡೆಸಿದರು.
ನಿನ್ನೆ ದಬ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಪರ ಮತ ಯಾಚನೆ ಮಾಡುತ್ತಾ ಮಾತನಾಡಿದ ಕಮಲ್ ನಾಥ್, ನಮ್ಮ ಅಭ್ಯರ್ಥಿ ಸುರೇಶ್ ರಾಜೆ ಸರಳ ಮನುಷ್ಯ, ಆಕೆಯಂಥಲ್ಲ, ಆಕೆಯ ಹೆಸರೇನು, ನಿಮಗೆಲ್ಲಾ ಆಕೆಯ ಬಗ್ಗೆ ನನಗಿಂತ ಚೆನ್ನಾಗಿ ಗೊತ್ತಿದೆ, ನೀವೆಲ್ಲಾ ಆಕೆಯ ಬಗ್ಗೆ ಮೊದಲೇ ಸೂಚನೆ ನೀಡಬೇಕಿತ್ತು, ಎಂತಹ ಐಟಂ ಎಂದು ಹೇಳಿದ್ದರು.
ಸಚಿವೆಯನ್ನು ‘ಐಟಂ’ ಎಂದ ಕಮಲ್ ನಾಥ್ : ವಿವಾದಾತ್ಮಕ ಹೇಳಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ
shivrajsingh chouhan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel