shivrajkumar
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಸ್ಟಾರ್ ಡೈರೆಕ್ಟರ್ ವಿಕಟಕವಿ ಯೊಗರಾಜ್ ಭಟ್ ರ ಕಾಂಬಿನೇಷನ್ ನಲ್ಲಿ ಮೊಟ್ಟ ಮೊದಲ ಸಿನಿಮಾ ಮೂಡಿಬರುತ್ತಿರೋದು ತಿಳಿದಿರುವ ವಿಚಾರವೇ. ಸದ್ಯ ಶಿವಣ್ಣನ ಅಭಿಮಾನಿಗಳು ಸಿನಿಪ್ರಿಯರಲ್ಲಿ ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿರೊದು ಸುಳ್ಲಲ್ಲ. ಇನ್ನೂ ವಿಶೇಷ ಎಂದ್ರೆ ಈ ಚಿತ್ರದಲ್ಲಿ ಡ್ಯಾನ್ಸ್ ಕಿಂಗ್ ಪ್ರಭುದೇವ ಅವರು ಶಿವಣ್ಣನ ಜೊತೆಗೆ ಕಾಣಿಸಿಕೊಳ್ತಾಯಿದ್ದಾರೆ. ಈ ಮೂಲಕ ಬರೋಬ್ಬರಿ 18 ವರ್ಷಗಳ ನಂತರ ಪ್ರಭುದೇವ ಅವರು ಚಂದನವನಕ್ಕೆ ಕಮ್ ಬ್ಯಾಕ್ ಮಾಡಿದಂತೆ ಆಗುತ್ತೆ.
ಆದ್ರೆ ಈ ವರೆಗೂ ಈ ಸಿನಿಮಾವಾಗಲಿ , ಕಾಸ್ಟಿಂಗ್ ಕುರಿತಾಗಲಿ ಮಾಹಿತಿ ಬಹಿರಂಗವಾಗಿಲ್ಲ. ಆದ್ರೆ ಸಿನಿಮಾದ ಬಗ್ಗೆ ಆಗಾಗ ಒಂದಿಷ್ಟು ಮಾಹಿತಿಗಳು ಕೆಲ ಬಲವಾದ ಮೂಲಗಳಿಂದ ತಿಳಿದು ಬರುತ್ತೆ. ಅದರಂತೆ ಈ ಸಿನಿಮಾ ಟೈಟಲ್ ಏನಿರಬಬಹುದು ಎಂದು ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಇತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಅಂದ್ಹಾಗೆ ಚಿತ್ರಕ್ಕೆ ‘ಕುಲದಲ್ಲಿ ಕೀಳ್ಯಾವುದೋ’ ಎಂಬ ಟೈಟಲ್ ಫಿಕ್ಸ್ ಮಾಡಿದ್ಯಂತೆÉ ಚಿತ್ರತಂಡ.
ವಿಶೇಷ ಅಂದ್ರೆ ಈ ಟೈಟಲ್ ಕೇಳಿದ ಕೂಡಲೇ ನೆನಪಾಗೋದು ವರನಟ ರಾಜ್ ಕುಮಾರ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ ಸತ್ಯ ಹರೀಶ್ಚಂದ್ರ ಎವರ್ ಗ್ರೀನ್ ಹಾಡು. ಆದರೆ ಈ ಟೈಟಲ್ ಇನ್ನೂವರೆಗೂ ಫೈನಲ್ ಆಗಿಲ್ಲ ಎನ್ನಲಾಗ್ತಿದೆ. ಈ ಚಿತ್ರದಲ್ಲಿ ಇನ್ನೂ ಒಂದು ವಿಶೇಷತೆ ಇದೆ. ಅದೇನೆಂದ್ರೆ ಪ್ರಭುದೇವ ಹಾಗೂ ಶಿವಣ್ಣ ಇಬ್ಬರೂ ಸಿನಿಮಾದಲ್ಲಿ 60ನೇ ಶತಕಕ್ಕೆ ಮರಳಲಿದ್ದಾರೆ.
ಹೌದು ಇಬ್ಬರು ನಟರು 60ರ ದಶಕದ ಪಾತ್ರಗಳಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ. ಸದ್ಯ ಯೋಗರಾಜ್ ಭಟ್ ಅವರು ಗಾಳಿಪಟ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ಹೊಸ ಸಿನಿಮಾ ಕೈಗೆತ್ತಿಕೊಳ್ಲಲಿದ್ದಾರೆ. ಇತ್ತ ಶಿವಣ್ಣ ಅವರು ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಚಂದನವನದ ಬಹುನಿರೀಕ್ಷೆಯ ಸಿನಿಮಾದ ಭಜರಂಗಿ -2 ನಲ್ಲಿ ಶಿವಣ್ಣ ನಿರತರಾಗಿದ್ದಾರೆ.
ಇದೇ ತಿಂಗಳ ಅಂತ್ಯದ ವೇಳೆಗೆ ಸಂಜನಾ, ರಾಗಿಣಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
shivrajkumar
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








