Shoaib Akhtar : “ಮಾಂಸ ತಿಂದು ಸಿಂಹಗಳಂತೆ ಬೇಟೆಯಾಡುತ್ತೇವೆ”
ಟೀಂ ಇಂಡಿಯಾ ಬೌಲರ್ ಗಳನ್ನು ಉದ್ದೇಶಿಸಿ ಪಾಕಿಸ್ತಾನ್ ವೇಗದ ಬೌಲರ್ ಶೋಯೆಬ್ ಅಖ್ತರ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ವೇಗದ ಬೌಲಿಂಗ್ ನಲ್ಲಿ ಪಾಕಿಸ್ತಾನದ ಬೌಲರ್ ಗಳು ಅಧಿಪತ್ಯ ವಿಚಾರವಾಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್ ಲೀ ಜೊತೆ ತನ್ನ ಯುಟೂಬ್ ಚಾನಲ್ ನಲ್ಲಿ ಮಾತನಾಡಿರುವ ಅಖ್ತರ್, ಭಾರತೀಯರ ಆಹಾರ ಪದ್ದತಿಯನ್ನ ಟೀಕೆಸುವಂತೆ ವ್ಯಾಖ್ಯಾನಗಳನ್ನ ಮಾಡಿದ್ದಾರೆ.
ಇತ್ತೀಚೆಗೆ ಟೀಂ ಇಂಡಿಯಾದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಪಾಕಿಸ್ತಾನಿ ಬೌಲರ್ ಗಳಿಗೆ ಹೋಲಿಕೆ ಮಾಡಿದ್ರೆ ತುಂಬಾ ಹಿಂದೆ ಇದ್ದಾರೆ ಎಂದು ಅಖ್ತರ್ ಹೇಳಿದ್ದಾರೆ.
ಭಾರತದ ವೇಗಿಗಳು ತಮ್ಮ ಆಹಾರ ಪದ್ದತಿಯಿಂದಾಗಿ ಬಲಹೀನವಾಗಿ ಕಾಣಿಸುವುದೇ ಪಾಕಿಸ್ತಾನ್ ಬೌಲರ್ ಗಳಿಗೂ ಅವರಿಗಿರುವ ವ್ಯಾತ್ಯಾಸ ಎಂದಿದ್ದಾರೆ.
ಪಾಕ್ ವೇಗಿಗಳ ಮುಖದಲ್ಲಿ ಕಾಣಿಸುವ ಛಲ, ಆಟಿಟ್ಯೂಡ್, ಟೀಂ ಇಂಡಿಯಾ ಪೇಸರ್ ಗಳ ಮುಖದಲ್ಲಿ ಕಾಣಿಸುವುದಿಲ್ಲ.
ಈ ವ್ಯಾತ್ಯಾಸ ಕ್ರಿಕೆಟ್ ಆರಂಭದಿಂದಲೂ ಇದೆ. ಇದಕ್ಕೆ ಕಾರಣ ನಮ್ಮ ಆಹಾರ ಮತ್ತು ವಾತಾರವಣ ಎಂದು ಅಖ್ತರ್ ವಾದ ಮಂಡಿಸಿದ್ದಾರೆ.
ಪಾಕ್ ಬೌಲರ್ ಗಳು ಬೌಲಿಂಗ್ ಮಾಡುವ ಸಂದರ್ಭದಲ್ಲಿ ಇತರೆ ವಿಚಾರಗಳ ಬಗ್ಗೆ ಆಲೋಚನೆ ಮಾಡುವುದಿಲ್ಲ. ಕೇವಲ ವಿಕೆಟ್ ಪಡೆಯುವುದಷ್ಟೇ ನಮ್ಮ ಲಕ್ಷ್ಯವಾಗಿರುತ್ತದೆ.
ಈ ಆಟಿಟ್ಯೂಡ್, ವೇಗವಾಗಿ ಚೆಂಡು ಎಸೆಯಲು ಬೇಕಾದ ಎನರ್ಜಿಯನ್ನು ನೀಡುತ್ತದೆ ಎಂದು ಅಖ್ತರ್ ವಿವರಿಸಿದ್ದಾರೆ. ಇದಕ್ಕೆ ಜೊತೆಯಾಗಿ ನಾನು ಹೆಚ್ಚಾಗಿ ಮಾಂಸ ತಿನ್ನುತ್ತೇವೆ, ಹೀಗಾಗಿಯೇ ದೃಢವಾಗಿರುತ್ತೇವೆ.
ಫಾಸ್ಟ್ ಬೌಲಿಂಗ್ ವಿಚಾರಕ್ಕೆ ಬಂದರೇ ಸಿಂಹಗಳಂತೆ ಓಡುತ್ತೇವೆ ಎಂದು ಅಖ್ತರ್ ಕಮೆಂಟ್ ಮಾಡಿದ್ದಾರೆ. ಪ್ರಸ್ತುತ ಪಾಕಿಸ್ತಾನಿ ಬೌಲರ್ ಗಳಲ್ಲಿ ಷಾಹಿನ್ ಅಫ್ರಿದಿ, ಹಾಸನ್ ಅಲಿ ಯಲ್ಲಿ ಇಂತಹ ಲಕ್ಷಣಗಳನ್ನು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ಹೇಳಿದ್ದಾರೆ.
ಇನ್ನು ಸದ್ಯ ಪ್ರಪಂಚ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ವೇಗದ ವಿಭಾಗ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಜಸ್ಪ್ರೀತ್ ಬುಮ್ರಾ, ಮೊಹ್ಮದ್ ಶಮಿ. ಉಮೇಶ್ ಯಾದವ್, ಇಶಾಂತ್ ಶರ್ಮಾ, ಮೊಹ್ಮದ್ ಸಿರಾಜ್, ನವದೀಪ್ ಸೈನಿ, ಶರ್ದೂಲ್ ಠಾಕೂರ್, ಸೇರಿದಂತೆ ಹಲವು ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದಾರೆ.