ಬೆಂಗಳೂರು : ಶೋಭಾ ಕರಂದ್ಲಾಜೆ ಜ್ಯೋತಿಷಿ ಅಲ್ಲ, ಸಂಸದೆ ಅನ್ನೋದನ್ನ ನೆನಪಿಸಿಕೊಳ್ಳಲಿ ಎಂದು ಮಾಜಿ ಸಚಿವೆ ಉಮಾಶ್ರೀ (Umashree) ವಾಗ್ದಾಳಿ ನಡೆಸಿದ್ದಾರೆ. ಆರ್.ಆರ್. ನಗರ ವಿಧಾನಸಭಾ ಉಪಚುನಾವಣೆ ಹಿನ್ನೆಲೆ ಡಿ.ಕೆ ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆದಾಗಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಉಮಾ ಶ್ರೀ, ಶೋಭಾ ಕರಂದ್ಲಾಜೆ.. ಅವರಿಗೆ ನೋವಾಗಿದೆ, ಇವರಿಗೆ ನೋವಾಗಿದೆ ಅಂತ ಜ್ಯೋತಿಷ್ಯ ಹೇಳೋ ಕೆಲಸ ಮಾಡೋದು ಬೇಡ. ಶೋಭ ಕರಂದ್ಲಾಜೆ ಜ್ಯೋತಿಷಿ ಅಲ್ಲ, ಸಂಸದೆ ಅನ್ನೋದನ್ನ ನೆನಪಿಸಿಕೊಳ್ಳಲಿ ಎಂದು ಗುಡುಗಿದರು.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷ ಕೋಮುವಾದಿ ಬಿಜೆಪಿ ಜೊತೆ ಸೇರಿದೆ : ಹೆಚ್.ಡಿ.ರೇವಣ್ಣ
ಕುಸುಮಾ ವೈಫ್ ಆಫ್ ಡಿ.ಕೆ.ರವಿ ಎಂದೇ ಹೇಳುತ್ತೇವೆ ಇದನ್ನು ಕೇಳಲು ಅವರ್ಯಾರು..? ಕುಸುಮಾ ಡಿ.ಕೆ. ರವಿ ಅವರ ಪತ್ನಿಯೇ, ಅದನ್ನೇ ಹೇಳುತ್ತೇವೆ.
ಯಾಕೆ ಹೇಳಬಾರದು..? ಎಂದು ಉಮಾಶ್ರೀ ಕಿಡಿಕಾರಿದ್ದು, ಗಂಡ ಸತ್ತವರು ಎಲೆಕ್ಷನ್ ಗೆ ನಿಲ್ಲಬಾರದು, ಗಂಡ ಬಿಟ್ಟವರು ಎಲೆಕ್ಷನ್ ಗೆ ನಿಲ್ಲಬಾರದು ಅಂತ ಸಂವಿಧಾನದಲ್ಲಿ ಎಲ್ಲೂ ಬರೆದಿಲ್ಲ, ರಾಜಕೀಯಕ್ಕೆ ಬರೋದು, ಚುನಾವಣೆಗೆ ನಿಲ್ಲೋದು ಮಹಿಳೆಯರ ಹಕ್ಕು ಎಂದು ಹೇಳಿದ್ದಾರೆ.
ಇದನ್ನೂ ಓದಿ :ಸಿ.ಟಿ ರವಿ ಸಮ್ಮಖದಲ್ಲಿ `ಕಮಲ’ ಹಿಡಿದ ಖುಷ್ಬೂ
ಆರ್.ಆರ್ ನಗರ ಬೈ ಎಲೆಕ್ಷನ್ ನಲ್ಲಿ ಡಿ.ಕೆ ರವಿ ಅವರ ಪತ್ನಿ ಕುಸುಮಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel