“ಜೊತೆಯಲ್ಲಿ ಕರೆದುಕೊಂಡು ಬಂದು ಈಗ ಬಿಟ್ಟು ಹೋಗ್ತೀರಾ?” ಇದು ಸಂಸದೆ ಶೋಭಾ ಕರಂದ್ಲಾಜೆ ಅವರು ಎಲ್ಲರೆದುರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಕೇಳಿದ ಪ್ರಶ್ನೆ. ಪಾಪ ಕರಂದ್ಲಾಜೆ ಅವರು ಈ ಪ್ರಶ್ನೆ ಕೇಳುತ್ತಿದ್ದಂತೆ ರಾಜಾಹುಲಿ ಯಡಿಯೂರಪ್ಪ ಫುಲ್ ಥಂಡಾ ಹೊಡೆದ್ಬಿಟ್ರು.. ಅಂದ್ಹಾಗೆ ಶೋಭಾ ಕರಂದ್ಲಾಜೆ ಅವರ ಈ ಕೋಪಕ್ಕೆ ಕಾರಣ ಏನಂದ್ರೆ, ನಿನ್ನೆ ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರ ಮಗಳ ಮದುವೆಯಲ್ಲಿ ಸಿಎಂ ಪಾಲ್ಗೊಂಡಿದ್ರು. ಬೆಂಗಳೂರಿನಿಂದ ಬಿಎಸ್ ವೈ ಜೊತೆ ಶೋಭಾ ಕರಂದ್ಲಾಜೆ ಅವರು ಸಹ ಹೋಗಿದ್ದರು. ವಧುವರರನ್ನು ಆಶೀರ್ವದಿಸಿದ ಬಳಿಕ ಬಿಎಸ್ ವೈ, ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳಲು ಅನುವಾದರು. ತಮ್ಮ ಜತೆ ಹೋಮ್ ಮಿನಿಸ್ಟರ್ ಬಸವರಾಜ ಬೊಮ್ಮಾಯಿ ಬರಲಿ ಎಂಬುದು ಸಿಎಂ ಅಪೇಕ್ಷೆಯಾಗಿತ್ತು.
ಆದ್ರೆ ಸಿಎಂ ಹೋಗುವ ವಿಮಾನದಲ್ಲಿ ಬೊಮ್ಮಾಯಿ ಹತ್ತಿಕೊಂಡುಬಿಟ್ಟರೆ ಕರಂದ್ಲಾಜೆ ಅವರಿಗೆ ಜಾಗವೇ ಇಲ್ಲದಂಗೆ ಆಗುತ್ತೆ. ಇದನ್ನು ಗಮನಿಸದ ಸಿಎಂ ವಿಮಾನ ಹತ್ತಪ್ಪ ಬಸೂ ಅಂದಿದ್ದಾರೆ.
ಈ ಮಾತು ಕೇಳುತ್ತಿದ್ದಂತೆ ಶೋಭಕ್ಕನ ಪಿತ್ತ ನೆತ್ತಿಗೇರಿದೆ. “ಜೊತೆಯಲ್ಲಿ ಕರೆದುಕೊಂಡು ಬಂದು ಈಗ ಬಿಟ್ಟು ಹೋಗ್ತೀರಾ?” ಎಂದು ಎಲ್ಲರೆದುರು ಕೇಳಿಬಿಟ್ಟಿದ್ದಾರೆ. ಇದರಿಂದ ಗಲಿಬಿಲಿಗೊಂಡ ಸಿಎಂ ಮ್ಯಾಕೆ ಕೆಳಕ್ಕೆ ನೋಡುತ್ತಾ ನಿಂತ್ಬಿಟ್ರು.
ಆಮೇಲೆ ಸ್ವತಃ ಬೊಮ್ಮಾಯಿ ಅವರು ನನ್ನ ಬದಲು ನೀವೇ ವಿಮಾನದಲ್ಲಿ ಹೋಗಿ ಎಂದು ಶೋಭಾ ಕರಂದ್ಲಾಜೆ ಅವರಿಗೆ ಸಮಾಧಾನ ಮಾಡುವ ಕೆಲಸ ಮಾಡಿದ್ರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ. ಎಸ್. ಷಡಾಕ್ಷರಿ ಪುನರಾಯ್ಕೆ
ಬೆಂಗಳೂರು, ಡಿಸೆಂಬರ್ 27: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ. ಎಸ್. ಷಡಾಕ್ಷರಿ ಅವರು ಎರಡನೇ ಬಾರಿ ಆಯ್ಕೆಯಾಗಿದ್ದಾರೆ. 2024-29 ಅವಧಿಗೆ ನಡೆದ ಚುನಾವಣೆಯಲ್ಲಿ...