KMF ಇಂದು ಮಧ್ಯ ರಾತ್ರಿಯಿಂದ ನಂದಿನಿ ಹಾಲಿನ ದರ ಏರಿಕೆ ಯಾಗಲಿದೆ ಹೌದು
ನಂದಿನಿ ಹಾಲಿನ ದರ ಏರಿಕೆ ಮಾಡುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ ,
ನಂದಿನಿ ಪ್ರತಿ ಲೀಟರ್ 3 ರೂಪಾಯಿ ಏರಿಕೆಯಾಗಲಿದೆ, ಹಾಲು ಮತ್ತು ಮೊಸರಿನ ದರ 3 ರು ಹೆಚ್ಚಳವಾಗಲಿದೆ ಎಂದು ಕೆಎಂಎಫ್ ಆದೇಶ ಹೊರಡಿಸಿದೆ.
ಈ ಹೊಸ ದರ ಇಂದು ನ.14 ಮಧ್ಯರಾತ್ರಿಯಿಂದ ಜಾರಿಗೋಳ್ಳಲಿದೆ . ಈಗ ಹೆಚ್ಚಳವಾದ ಹಣವನ್ನು ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ನೀಡಲಾಗುತ್ತದೆ ಎಂದು ಕೆಎಂಫ್ ತಿಳಿಸಿದೆ.
ಈಗ ಇರುವ ಹಾಲುಗಳ ದರ
ನಂದಿನಿ 37 ರೂ
ದೊಡ್ಲ 44 ರೂ
ಜೆರ್ಸಿ 44 ರೂ
ಹೆರಿಟೇಜ್ 48 ರೂ
ತಿರುಮಲ 48 ರೂ
ಗೋವರ್ಧನ್ 46 ರೂ
ಆರೋಗ್ಯ 50 ರೂ
ಇವುಗಳ ಮೇಲೆ 3 ರೂ ಹೆಚ್ಚಳವಾಗಲಿದೆ .
ಕೆಎಂಎಫ್ ರಾಜ್ಯ ಸರ್ಕಾರಕ್ಕೆ ಕಳೆದ 8 ತಿಂಗಳಿನಿಂದ ಹಾಲಿನ ದರ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸುತ್ತಿತ್ತು ಆದರೆ ಸರ್ಕಾರ ಸ್ಪಂದಿಸಿಲ್ಲ.
ಹೀಗಾಗಿ ಕೆಎಂಎಫ್ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿ, ರಾಜ್ಯ ಸರ್ಕಾರದ ಅನುಮೋದನೆ ಇಲ್ಲದೆ ಹಾಲಿನ ಬೆಲೆಯನ್ನು ಒಂದು ಲೀಟರ್ಗೆ 3 ರೂಪಾಯಿ ಹೆಚ್ಚಿಸಿದೆ.








