ಆಟೋ ಚಾಲಕನೊರ್ವನನ್ನ ಮಾರಕಾಸ್ತ್ರದಿಂದ ದುಷ್ಕರ್ಮಿಗಳು ಕೊಚ್ಚಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಆರ್ ಟಿ ನಗರದ ಎಲ್ ಆರ್ ಬಂಡೆ ರೈಲ್ವೆ ಗೇಟ್ ಬಳಿ ನಡೆದಿದೆ.
ವಿನೋದ್ ಎಂಬಾತ ಪಾಪಿಗಳ ಕೃತ್ಯಕ್ಕೆ ಬಲಿಯಾದ ಆಟೋ ಚಾಲಕನಾಗಿದ್ದಾನೆ. ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಿನಿಮೀಯ ರೀತಿಯಲ್ಲಿ ವಿನೋದ್ ಮೇಲೆ ದಾಳಿ ಮಾಡಿದ ಹಂತಕ ಗುಂಪು, ತಾವು ತಂದಿದ್ದ ಮಚ್ಚುಗಳಿಂದ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದಾರೆ. ಮಚ್ಚೇಟಿನಿಂದ ತೀವ್ರ ಹಲ್ಲೆಗೊಳಗಾದ ವಿನೋದ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಇನ್ನು, ಘಟನಾ ಸ್ಥಳಕ್ಕೆ ಆಗಮಿಸಿದ ಡಿಜಿ ಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ, ಸ್ಥಳದಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಕಲಿಸಿಕೊಂಡು ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.