Shocking: ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿದ ಯುವಕ
ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ನೃತ್ಯ ಕಲಾವಿದರೊಬ್ಬರು ಸಾವನ್ನಪ್ಪಿರುವ ಘಟನೆ ಜಮ್ಮುವಿನಲ್ಲಿ ವರದಿಯಾಗಿದೆ.
ಕಲಾವಿದನನ್ನ 20 ವರ್ಷದ ಯೋಗೇಶ್ ಗುಪ್ತಾ ಎಂದು ಗುರುತಿಸಲಾಗಿದೆ. ಪಾರ್ವತಿ ದೇವಿಯ ವೇಷ ಧರಿಸಿ, ಜಮ್ಮುವಿನ ಬಿಷ್ನಾದಲ್ಲಿ ಗಣೇಶ ಉತ್ಸವದಲ್ಲಿ ನಿಮಿತ್ತ ಪ್ರದರ್ಶನ ನೀಡುವಾಗ ದುರ್ಘಟನೆ ಸಂಭವಿಸಿದೆ.
ಉತ್ಸಾಹ ಭರಿತವಾಗಿ ನೃತ್ಯ ಮಾಡುವ ವೇಳೆ ಹೃದಯಾಘಾತವಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
एक और हादसा।
हंसते-गाते-नाचते हुए एक और मौत की LIVE तस्वीर। यह बहुत चिंताजनक ट्रेंड है। अब इसपर बहुत गंभीरता से व्यापक तरीक़े से बात होनी चाहये pic.twitter.com/FGPxQvWHit
— Narendra nath mishra (@iamnarendranath) September 8, 2022
ನೃತ್ಯದ ಭಾಗವಾಗಿ ಕೇಳಕ್ಕೆ ಬೀಳುವ ಅವರು ಕೆಲ ಸೆಕೆಂಡುಗಳ ನಂತರ, ಡ್ಯಾನ್ಸ್ ಮಾಡುತ್ತಲೇ ಮತ್ತೆ ಕುಸಿದು ಬೀಳುತ್ತಾರೆ. ಆದರೆ ಅಲ್ಲಿದ್ದವರೆಲ್ಲ ಇದನ್ನ ನೃತ್ಯದ ಭಾಗವೆಂದೇ ಅಂದುಕೊಳ್ಳುತ್ತಾರೆ. ಶಿವನ ವೇಷ ಧರಿಸಿದ ಮತ್ತೊಂಬ್ಬ ಕಲಾವಿದ ವೇದಿಕೆ ಮೇಲೆ ಬಂದು ತಪಾಸಣೆ ನಡೆಸಿದ ಬಳಿಕವಷ್ಟೇ ಹೃದಯಾಘಾತವಾಗಿರುವುದು ಅರಿವಾಗಿದೆ. ತಕ್ಷಣ ಯೋಗೇಶನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಯೋಗೇಶ್ ಗುಪ್ತಾ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು.
ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.