ಬೀಡಿ ತರಲು ತಡ ಮಾಡಿದ್ದಕ್ಕೆ 10 ವರ್ಷದ ಮಗನಿಗೆ ಬೆಂಕಿ ಹಚ್ಚಿದ ತಂದೆ..!
ಹೈದರಾಬಾದ್: ಮಗ ಬೀಡಿ ತರಲು ತಡ ಮಾಡಿದ್ದಕ್ಕೆ, ತಂದೆಯೇ ಮಗನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಹೇಯ ಕೃತ್ಯ ಹೈದ್ರಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಬೆಂಕಿ ಅವಘಡದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ 10 ವರ್ಷದ ಬಾಲಕನನ್ನ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಮರ್ಯಾದೆ ಕೊಡದ ಮಗನ ತಲೆ-ಕೈಕಾಲು ಕಡಿಸಿದ ಪಾಪಿ ತಂದೆ : ಚಿಕ್ಕ ಮಗನಿಂದಲೇ ಸುಪಾರಿ ಕೊಡಿಸಿದ ಕ್ರೂರಿ..!
ಕುಡಿದ ಅಮಲಿನಲ್ಲಿ ತಂದೆ ತನ್ನ ಮಗನಿಗೆ ಬೀಡಿ ತರಲು ಹೇಳಿದ್ದಾನೆ. ಮಗ ಬೀಡಿ ತರಲು ತಡ ಮಾಡಿದ ಹಿನ್ನೆಲೆಯಲ್ಲಿ ಮಗನಿಗೆ ಬೆಂಕಿ ಹಚ್ಚಿದ್ದ. ಪರಿಣಾಮ ಬಾಲಕ ಚರಣ್ ಸಾವನ್ನಪ್ಪಿದ್ದಾನೆ. ಸಾಯುವ ಮುನ್ನ ಬಾಲಕ ತನ್ನ ತಂದೆ ಬೆಂಕಿ ಹಚ್ಚಿದ್ದಾಗಿ ಹೇಳಿಕೆ ದಾಖಲಿಸಿದ್ದ. ಬಾಲಕನ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ.
ಅನೈತಿಕ ಸಂಬಂಧಕ್ಕೆ ಬಲಿಯಾದ ಪತಿ : ಹೊರಗೆ ಹೋಗಿದ್ದಾಗ ಸ್ಕೆಚ್ ಹಾಕಿ ಕೊಲ್ಲಿಸಿದಳು ಪಾಪಿ..!
ಬಂಧನದ ನಂತರ ಆರೋಪಿ ರಥ್ಲಾವತ್ ಬಾಲು ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಆದರೆ ತನ್ನ ಮಗ ತರಗತಿಗಳಿಗೆ ಹಾಜರಾಗದೇ ಲಾಕ್ ಡೌನ್ ನಂತರ ತುಂಬಾ ಅಹಂಕಾರದಿಂದ ವರ್ತಿಸುತ್ತಿದ್ದ ಎಂದು ಆರೋಪಿ ತಂದೆ ಪೋಲೀಸರ ಬಳಿ ಹೇಳಿದ್ದಾನೆ. ಆದ್ರೆ ಮಗ ಪೋಲಿ ಬಿದ್ದರೆ ಆತನ ತಿದ್ದಿ ಸರಿ ದಾರಿಗೆ ತರುವುದು ಬಿಟ್ಟು ಇಂತಹ ಹೇಯ ಕೃತ್ಯಕ್ಕೆ ಕೈ ಹಾಕುವುದು ಯಾವ ನ್ಯಾಯ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel