ಬಂದ್ ನಿಂದ ಆಗಿರುವ ಉಪಯೋಗ ತೋರಿಸಿ : ಸುಮಲತಾ Sumalatha saaksha tv
ಮಂಡ್ಯ : ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಮುಂದಿನ ಜನವರಿಯಲ್ಲಿ ಪಾದಯಾತ್ರೆ ಆರಂಭಿಸಲಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿದ್ದು, ಇದು ಅವರ ಪಕ್ಷದ ನಿರ್ಧಾರ. ಆದರೇ ಈವರಿಗೆ ಪಾದಯಾತ್ರೆ, ಬಂದ್ ನಿಂದ ಹಾಗಿರುವ ಉಪಯೋಗ ತೋರಿಸಿ ಎಂದು ಪ್ರಶ್ನಿಸಿದರು.
ರಾಜಕಾರಣದಲ್ಲಿ ಒಂದೊಂದು ಮುಂಮೆಂಟ್ಸ್ ನೋಡುದ್ರೆ, ನಿಜವಾದ ಹೋರಾಟ ಎಲ್ಲಿಂದ ಬರಬೇಕು. ಡಿಸಿಶನ್ ಮೇಕರ್ ಯಾರು ಅಂತಾನು ಯೋಚನೆ ಮಾಡಬೇಕು.
ಅವರು ಒಳ್ಳೆಯ ಉದ್ದೇಶ ಇಟ್ಟುಕೊಂಡು ಪಾದಯಾತ್ರೆ ಮಾಡ್ತಿರಬಹುದು ಒಳ್ಳೆಯದಾಗಲಿ. ಮೇಕೆದಾಟು ಯೋಜನೆ ಆಗಬೇಕು ಅನ್ನುವುದೇ ನಮ್ಮ ಒತ್ತಾಯ. ಯಾರಿಂದ ಹಾಗುತ್ತೆ, ಅನ್ನೊದಲ್ಲ ಮುಖ್ಯ, ಹಾಗಬೇಕು ಅಷ್ಟೆ ಎಂದು ಹೇಳಿದ್ದಾರೆ.
ಇದೇ ಮೈಶುಗರ್ ಕಾರ್ಖಾನೆ ಯಾವುದೋ ಒಂದು ಮಾಡೆಲ್ ನಲ್ಲಿ ಫಸ್ಟ್ ಓಪನ್ ಮಾಡಿ ಎಂದು ಸಂಸದೆ ಒತ್ತಾಯಿಸಿದರು.









