Shraddha Murder Case: ಹುಡುಗಿ ದೆವ್ವವಾಗಿ ಆತನನ್ನ 70 ತುಂಡು ಮಾಡಬೇಕು – ರಾಮ್ ಗೋಪಾಲ್ ವರ್ಮಾ…
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣದ ದೇಶಾದ್ಯಂತ ಸಂಚಲನವನ್ನ ಸೃಷ್ಟಿಸಿದೆ. ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ 26 ವರ್ಷದ ಶ್ರದ್ಧಾ ಎಂಬ ಯುವತಿಯನ್ನ ಪ್ರಿಯಕರ ಅಫ್ತಾಬ್ ಅಮೀನ್ ಬರ್ಬರವಾಗಿ ಕೊಲೆ ಮಾಡಿ 35 ತುಂಡುಗಳಾಗಿ ಕತ್ತರಿಸಿರುವ ಸುದ್ಧಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ ಸಮಾಜದ ಪ್ರತಿಯೊಂದು ವಿಚಾರಕ್ಕೂ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ದೆಹಲಿ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ “ಸತ್ತ ಹುಡುಗಿ ದೆವ್ವವಾಗಿ ಹಿಂತಿರುಗಬೇಕು ಮತ್ತು ಕೊಲೆಗಾರನನ್ನು ಎಪ್ಪತ್ತು ತುಂಡುಗಳಾಗಿ ಕತ್ತರಿಸಬೇಕು ಎಂದು ಬರೆದಿದ್ದಾರೆ. ಅಷ್ಟಕ್ಕೆ ನಿಲ್ಲದ ವರ್ಮಾ, ಈಗಿರುವ ಕಾನೂನುಗಳು ಇಂತಹ ಘೋರ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಅದು ರಾಕ್ಷಸರಿಂದ ಮಾತ್ರ ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.
ಈ ನಡುವೆ ಕೊಲೆ, ದರೋಡೆಯನ್ನೇ ಸಿನಿಮಾದ ವಸ್ತುವನ್ನಾಗಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ ದೆಹಲಿ ಕೊಲೆ ಪ್ರಕರಣವನ್ನೂ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆಯಂತೆ. ಈಗಾಗಲೇ ಕೆಲವು ನೈಜ ಕೊಲೆಗಳ ಕಥಾವಸ್ತುವನ್ನಿಟ್ಟುಕೊಂಡು ಸಿನಿಮಾ ಮಾಡಿರುವ ವರ್ಮಾ ಸದ್ಯದಲ್ಲೇ ದೆಹಲಿ ಹುಡುಗಿಯ ಕೊಲೆಯನ್ನು ಬೆಳ್ಳಿತೆರೆಯಲ್ಲಿ ತೋರಿಸಲಿದ್ದಾರೆ ಎಂದು ವರದಿಯಾಗಿದೆ. ಪ್ರತಿಯೊಂದು ಅಂಶವನ್ನು ತನ್ನ ಪರವಾಗಿ ಬದಲಾಯಿಸಿಕೊಳ್ಳುವ ವರ್ಮಾ ಈಗೇನು ಮಾಡುತ್ತಾರೋ ನೋಡಬೇಕು..
Shraddha Murder Case: Girl should be cut into 70 pieces as devil – Ram Gopal Verma…