shraddha
ಯು ಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ತೆಲುಗು, ಹಿಂದಿ, ಮಳಯಾಳಂ ಸಿನಿಮಾಗಳಲ್ಲಿ ನಟಿಸುತ್ತಿರುವ ಶ್ರದ್ಧಾ ಇದೀಗ ಹಾರರ್ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಹೌದು ಪ್ರಸ್ತುತ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಶ್ರದ್ಧಾ ಇದೀಗ ಯುಟರ್ನ್ ನಂತರ ಮತ್ತೊಂದು ಹಾರರ್ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೇ ಶ್ರದ್ಧಾ ಅವರ ನಟನೆಯ ಮಳಯಾಳಂ ಚಿತ್ರವೊಂದು ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಹೊಸ ಚಿತ್ರಕ್ಕೆ ನಟಿ ಸಹಿ ಹಾಕಿದ್ದಾರೆ. ಈ ಚಿತ್ರ ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ.
ಲಾಕ್ ಡೌನ್ ಬಳಿಕ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿರುವ ದಕ್ಷಿಣ ಭಾರತದ ಮೊದಲ ಸಿನಿಮಾ ‘ಆಕ್ಟ್-1978’
ಇಂದೊಂದು 2050ರ ಕಾಲಘಟ್ಟದ ಕಥಾಹಂದರ ಹೊಮದಿರುವ ಸಿನಿಮಾವಾಗಿದೆ. ಆದ್ರೆ ಸಿನಿಮಾದಲ್ಲಿ ಟ್ವಿಸ್ಟ್ ಗಳು ಇವೆ. ಅಂದ್ಹಾಗೆ ಟೈಮ್ ಟ್ರಾವೆಲ್ ಕಥೆ ಸಹ ಇರಬಹುದು ಎನ್ನಲಾಗಿದೆ. ಅಂದ್ರೆ ಶ್ರದ್ಧಾ 30 ವರ್ಷ ಮುಂದೆ ಹೋಗುತ್ತಿದ್ದಾರೆ. ಅನೇಕ ವರ್ಷಗಳ ಹಿಂದಿನ ಕಾಲಘಟ್ಟದ ಕಥೆ ಹೊಂದಿರುವ ಸಾಕಷ್ಟು ಸಿನಿಮಾಗಳು ಬಂದಿವೆ, ಬರ್ತಿವೆ. ಆದರೆ ಈ ಸಿನಿಮಾ 30 ವರ್ಷಗಳ ಕಾಲ ಮುಂದಕ್ಕೆ ನಡೆಯುತ್ತಿರುವುದು ವಿಶೇಷ. ಅಂದಹಾಗೆ ಚಿತ್ರಕ್ಕೆ ಕಲಿಯುಗಂ ಎಂದು ಶೀರ್ಷಿಕೆ ಇಡಲಾಗಿದೆ. ಸದ್ಯ ಟೈಟಲ್ ನಿಂಸದಲೇ ಚಿತ್ರ ಭಾರೀ ಸದ್ದು ಮಾಡ್ತಿದ್ದು, ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರಕ್ಕೆ ಪ್ರಮೋದ್ ಸುಂದರ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನೂ ಈ ಚಿತ್ರದ ಶೂಟಿಂಗ್ ಸದ್ಯಕ್ಕೆ ಪ್ರಾರಂಭವಾಗೋದಿಲ್ಲ ಮುಂದಿನ ವರ್ಷದ ಆರಂಭ ಅಂದ್ರೆ ಜನವರಿಯಲ್ಲಿ ಶೂಟಿಂಗ್ ಆರಂಭವಾಗಲಿದೆಯಂತೆ.
shraddha
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








