Shraddha Walker: ಸಿನಿಮಾ ಆಗಲಿದೆ ಶ್ರದ್ಧಾ ಹತ್ಯೆ ಪ್ರಕರಣ
ದೇಶದಾದ್ಯಂತ ಸಂಚಲನ ಮೂಡಿಸಿದ ಮುಂಬೈ ನಿವಾಸಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಸಿನಿಮಾ ಆಗಲಿದೆ.
ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಮನೀಶ್ ಸಿಂಗ್ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.
ಈ ಚಿತ್ರಕ್ಕೆ ‘Who Killed Shraddha Walker’ ಎಂದು ಟೈಟಲ್ ಫಿಕ್ಸ್ ಮಾಡಿದ್ದು, ಲವ್ ಜಿಹಾದ್ ಕುರಿತು ಸಿನಿಮಾದಲ್ಲಿ ಹೇಳಲಾಗುವುದು. ಜಿಹಾದಿಗಳ ಕುತಂತ್ರವನ್ನು ಈ ಚಿತ್ರ ಬಯಲು ಮಾಡಲಿದೆ ಎಂದು ಮನೀಶ್ ಸಿಂಗ್ ಹೇಳಿದ್ದಾರೆ.
ವೃಂದಾವನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಲೋಕೆಷನ್ ಗಳ ಹುಡುಕಾಟ ಆರಂಭವಾಗಿದೆ. ಆದರೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವವರೆಗೆ ಚಿತ್ರಕಥೆಯನ್ನು ಅಂತಿಮಗೊಳಿಸುವುದಿಲ್ಲ ಎಂದು ಮನೀಶ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.