ಮಹಾತ್ಮ ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶ್ರಮದಾನ ಹಾಗೂ ಉಜ್ವಲ ಗ್ಯಾಸ್ ಯೋಜನೆಯ ಕುರಿತು ವೆಬಿನಾರ್ ನಡೆಯಿತು.
ಬೆಂಗಳೂರಿನ ಐ.ಟಿ.ಐ ಸೆಂಟ್ರಲ್ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಎನ್.ಸಿ.ಸಿ ಕೆಡೆಟ್ ಗಳಿಂದ ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಾದ ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್.ಸಿ.ಸಿ. ಯೂನಿಟ್ ವತಿಯಿಂದ ಪ್ರಧಾನಮಂತ್ರಿ ಸೌಭಾಗ್ಯ (ವಿದ್ಯುತ್) ಯೋಜನೆ , ಜನ್ ಧನ್ ಯೋಜನೆ, ಉಜ್ವಲಾ ಗ್ಯಾಸ್ ಯೋಜನೆ, ಆಯುಷ್ಮಾನ್ ಭಾರತ್ ಮಿಷನ್, ಇಂದ್ರಧನುಷ್ ನಂತಹ ಯೋಜನೆಗಳ ಬಗ್ಗೆ ಈ ವೇಳೆ ಜನರಿಗೆ ಅರಿವು ಮೂಡಿಸಲಾಯಿತು.
ಅಲ್ಲದೇ, ಮಹಾತ್ಮ ಗಾಂಧಿ ಜಯಂತಿಯಂದು ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು. ಹೀಗಾಗಿ ಎನ್ ಸಿಸಿ ಕೆಡೆಟ್ ಗಳಿಂದ ಶ್ರಮದಾನ ನಡೆಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪೊನ್ಮಲಾರ್, ಉಪ ಪ್ರಾಂಶುಪಾಲರಾದ ಶೈಲಜಾ ಆರಾಧ್ಯ, ಮುಖ್ಯ ಶಿಕ್ಷಕಿ ಅರುಣಾ ಜಾನಕಿರಾಮನ್, ಬಾಲಕೃಷ್ಣ ವಿ.ಎಚ್ ಸೇರಿದಂತೆ ಹಲವರು ಇದ್ದರು.