ಸುಟ್ಟಗಾಯಗಳಿಂದ ಎದ್ದು ಬಂದು ಮಿಸ್ ವರ್ಲ್ಡ್ ವೇದಿಕೆಯೇರಿದ ಗಟ್ಟಿಗಿತ್ತಿ – ಶ್ರೀ ಸೈನಿ
ಮಿಸ್ ವರ್ಲ್ಡ್ ಮಿಸ್ ಯೂನಿವರ್ಸ್ ಇಂಥಹ ಸ್ಪರ್ಧೆಗಳನ್ನ ಸೌಂದರ್ಯದ ಆಸ್ವಾದನೆಗಾಗಿ ನೋಡುವರೆ ಹೆಚ್ಚು, ವೇದಿಕೆ ಮೇಲೇರಿ ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಳ್ಳುವುದಕ್ಕೂ ಸಾಕಷ್ಟು ಕಸರತ್ತು ನಡೆಸಬೇಕು ಪರಿಶ್ರಮ ಪಡಬೇಕು ಎಷ್ಟೋ ಜನರಿಗೆ ತಿಳಿಯುವುದಿಲ್ಲ. ಚಿಕ್ಕ ವಯಸ್ಸಿನಲ್ಲೆ ಹೃದಯದ ಕಾಯಿಲೆಯಿಂದ ಬಳಲಿ, ಕಾರ್ ಆಕ್ಸಿಡೆಂಟ್ ನಲ್ಲಿ ಮುಖ ಸುಟ್ಟು ಹೋದರು ಫಿನಿಕ್ಸ್ ನಂತೆ ಎದ್ದು ಬಂದು ವಿಶ್ವ ಸುಂದರಿ ವೇದಿಕೆ ಮೇಲೆ ರಾರಾಜಿಸಿದ ಬೆಂಕಿಯಲ್ಲಿ ಅರಳಿದ ಬ್ಯೂಟಿಯ ಬಗ್ಗೆ ನಾವು ತಿಳಿಸಿಕೊಡ್ತೀವಿ…
ಪೋರ್ಟೊ ರಿಕೊದ ಕೋಕಾ-ಕೋಲಾ ಮ್ಯೂಸಿಕ್ ಹಾಲ್‌ನಲ್ಲಿ ಮಾರ್ಚ್ 16 ರಂದು ನಡೆದ ಪ್ರತಿಷ್ಠಿತ ವಿಶ್ವ ಸುಂದರಿ 2021 ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಅಮೆರಿಕನ್ ಯುವತಿ ಶ್ರೀ ಸೈನಿ ಮೊದಲ ರನ್ನರ್ ಅಪ್ ಆಗಿ ಹೊಹೊಮ್ಮಿದರು ಈ ಮೂಲಕ ವಿದೇಶದಲ್ಲಿ ನೆಲೆಸಿರುವ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ಪಡುವಂತಹ ಕ್ಷಣವನ್ನ ಸೃಷ್ಟಿಸಿದರು. ಸೌಂದರ್ಯ ಸ್ಪರ್ದೆಯಲ್ಲಿ ಅಮೆರಿಕಾವನ್ನ ಪ್ರತಿನಿಧಿಸಿ ಈ ಹುಡುಗಿ ಯಾರು ಎಮದು ಹುಡುಕುತ್ತ ಹೊರಟ ನಮಗೆ ಹಲವು ಅಚ್ಚರಿಯ ವಿಷಯಗಳು ತಿಳಿದುಬಂದವು.
ವಿಶ್ವ ಸುಂದರಿ ಮೊದಲ ರನ್ನರ್ ಅಪ್ ಶ್ರೀ ಸೈನಿ ಮೂಲತಃ ಭಾರತದವರು. ಜನವರಿ ಜನವರಿ 6, 1996 ರಂದು ಪಂಜಾಬ್‌ನ ಲುಧಿಯಾನಾದಲ್ಲಿ ಜನಿಸಿದರು. ಸೈನಿ 5 ನೇ ವಯಸ್ಸಿನಿಂದ ಅಮೆರಿಕಾದ ವಾಷಿಂಗ್ ಟನ್ ನಲ್ಲಿ ವಾಸವಿದ್ದಾರೆ.
ಶ್ರೀ ಸೈನಿ 12 ವಯಸ್ಸಿನಲ್ಲಿದ್ದಾಗ ಅಪರೂಪದ ಹೃದಯ ಸಂಬಂಧಿ ತೊಂದರೆಯಿಂದ ತೊಂದರೆಯಿಂದ ಬಳಲುತ್ತಿದ್ದರು. ಅವರ ಹೃದಯ ಪ್ರತಿ ನಿಮಿಷಕ್ಕೆ ಕೇವಲ 20 ಭಾರಿ ಮಾತ್ರ ಬಡಿದುಕೊಳ್ಳುತ್ತಿತ್ತು. ವೈದ್ಯರು ಈಕೆ ಮತ್ತೆ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದು. ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಶಾಶ್ವತವಾದ ಪೇಸ್ ಮೇಕರ್ ಅಳವಡಿಸಿಕೊಂಡು ಜೀವಿಸುತ್ತಿದ್ದಾರೆ. ಪೇಸ್ ಮೇಕರ್ ಹೃದಯ ಬಡಿತ ಲಯಬದ್ದವಾಗಿರುವಂತೆ ನೋಡಿಕೊಳ್ಳುತ್ತದೆ. ಶಸ್ತ್ರ ಚಿಕಿತ್ಸೆಯ ನಂತರ ಪಟ್ಟು ಹಿಡಿದು ಹಲವು ವರ್ಷಗಳ ಸತತ ಅಭ್ಯಾಸದ ನಂತರ ನೃತ್ಯದಲ್ಲಿ ಹಿಡಿತ ಪಡೆದರು.
ಇದಷ್ಟೆ ಅಲ್ಲದೆ ಮೊಸೆಸ್ ಲೇಕ್ ಬಳಿ ಬೀಕರ ಕಾರು ಅಪಘಾತಕ್ಕೆ ತುತ್ತಾದರು. ಕಾರು ಆಪಘಾತದಲ್ಲಿ ಮಾರಣಾಂತಿಕ ಸಮಸ್ಯೆಗಳನ್ನ ಎದುರಿಸಿದರು. ಮುಖದ ತುಂಬ ಸುಟ್ಟ ಗಾಯಗಳಾಗಿದ್ದವು. ಇದ್ಯಾವುದಕ್ಕೂ ಎದೆಗುಂದದ ಯುವತಿ ಕಷ್ಟಗಳನ್ನ ಮೆಟ್ಟಿನಿಂತು ಸಮಸ್ಯೆಗಳನ್ನ ಎದುರಿಸಿ ವಿಶ್ವ ಸುಂದರಿ ವೇದಿಯ ಮೇಲೆ ರಾರಾಜಿಸಿದ್ದಾರೆ.
ಶ್ರೀ ಸೈನಿ ಮೊದಲ ರನ್ನರ್ ಅಪ್ ಗೆ ತೃಪ್ತಿ ಹೊಂದಿದರಾದರೂ ಈ ಸಾಧನೆ ಕಡಮೆ ಏನಲ್ಲ ಮಿಸ್ ವರ್ಲ್ಡ್ 2021 ಕಿರೀಟವನ್ನು ಗೆದ್ದ ಮೊದಲ ಭಾರತೀಯ-ಅಮೆರಿಕನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮಿಸ್ ವರ್ಲ್ಡ್ ಈವೆಂಟ್‌ಗೆ ಹೋಗುವುದಕ್ಕೂ ಮುನ್ನ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಟೋಗಳನ್ನ ಪೋಸ್ಟ್ ಮಾಡಿರುವ ಶ್ರೀ ಸೈನಿ, ‘ಮುಖದ ಸುಟ್ಟಗಾಯಗಳು ಮತ್ತು ಹೃದಯ ದೋಷವನ್ನು ನಿವಾರಿಸಿಕೊಂಡ ನನ್ನ ಕಥೆಯು ದೈನಂದಿನ ಜೀವನದಲ್ಲಿ ಸವಾಲುಗಳನ್ನು ಎದುರಿಸುತ್ತಿರುವರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.