Shreeshanth | ಪ್ರಥಮ ದರ್ಜೆ ಕ್ರಿಕೆಟ್’ಗೆ ಶ್ರೀಶಾಂತ್ ಗುಡ್ ಬೈ
ವಿವಾದದಿಂದಲೇ ಪ್ರಸಿದ್ಧಿಯಾಗಿದ್ದ ಕೇರಳ ಕ್ರಿಕೆಟಿಗ
ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ ಶಾಂತಕುಮಾರನ್
ಯುವಕರಿಗೆ ಅವಕಾಶ ನೀಡಲು ವಿದಾಯ ಘೋಷಣೆ
ಈ ನಿರ್ಧಾರದಿಂದ ನನಗೆ ಸಂತೋಷ ನೀಡುವುದಿಲ್ಲ
ಟೀಂ ಇಂಡಿಯಾ ಕಂಡ ಅತ್ಯುತ್ತಮ ಬೌಲರ್ ಎನಿಸಿದ್ದ ಶಾಂತಕುಮಾರನ್ ಶ್ರೀಶಾಂತ್, ಎಲ್ಲಾ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಒಂಭತ್ತು ವರ್ಷದ ಬಳಿಕ ಕ್ರಿಕೆಟ್ ಅಂಗಳಕ್ಕೆ ಕಮ್ಬ್ಯಾಕ್ ಮಾಡಿದ್ದ 39 ವರ್ಷದ ಶ್ರೀಶಾಂತ್, ಎಲ್ಲಾ ಮಾದರಿಯ ಡೊಮೆಸ್ಟಿಕ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಿರುವ ಕುರಿತು ಟ್ವಿಟರ್ನಲ್ಲಿ ತಿಳಿಸಿದ್ದಾರೆ. “ನನ್ನ 25 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ನಾನು ಯಶಸ್ಸನ್ನು ಮತ್ತು ಗೆಲುವುಗಳನ್ನು ಕಂಡಿದ್ದೇನೆ.
ಭಾರವಾದ ಹೃದಯದಿಂದ ಭಾರತೀಯ ಡೊಮೆಸ್ಟಿಕ್(ಪ್ರಥಮ ದರ್ಜೆ ಮತ್ತು ಎಲ್ಲಾ ಮಾದರಿ) ಕ್ರಿಕೆಟ್ನಿಂದ ನಿವೃತ್ತಿ ಪಡೆಯುತ್ತಿದ್ದೇನೆ.
ಮುಂದಿನ ಪೀಳಿಗೆಯ ಕ್ರಿಕೆಟಿಗರಿಗಾಗಿ ನನ್ನ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲು ತೀರ್ಮಾನಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಶ್ರೀಶಾಂತ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 74 ಪ್ರಥಮ ದರ್ಜೆ ಪಂದ್ಯಗಳಲ್ಲಿ 213 ವಿಕೆಟ್ಗಳನ್ನು ಪಡೆದಿದ್ದು, 92 ಲಿಸ್ಟ್-ಎ ಪಂದ್ಯಗಳಲ್ಲಿ 124 ವಿಕೆಟ್ ಪಡೆದಿದ್ದಾರೆ.
ಅಲ್ಲದೆ 65 ಟಿ20 ಪಂದ್ಯಗಳಿಂದ 54 ವಿಕೆಟ್ ಕಬಳಿಸಿದ್ದಾರೆ. ಶ್ರೀಶಾಂತ್, 2005ರ ಅಕ್ಟೋಬರ್ನಲ್ಲಿ ಶ್ರೀಲಂಕಾ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು.
ಏಕದಿನ ಕ್ರಿಕೆಟ್ನಲ್ಲಿ 53 ಪಂದ್ಯಗಳಲ್ಲಿ 75 ವಿಕೆಟ್, 27 ಟೆಸ್ಟ್ಗಳಿಂದ 87 ವಿಕೆಟ್ ಹಾಗೂ 10 ಅಂತಾರಾಷ್ಟ್ರೀಯ ಟಿ20 ಪಂದ್ಯದಿಂದ 7 ವಿಕೆಟ್ ಪಡೆದಿದ್ದಾರೆ.
Shreeshanth Retired from all format of first-class cricket









