ಅಹಮದಾಬಾದ್ ತಂಡಕ್ಕೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್..! Shreyas Iyer saaksha tv
ಮುಂದಿನ ವರ್ಷದ ಐಪಿಎಲ್ ಗಾಗಿ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಮೆಗಾ ಹರಾಜು ಹಿನ್ನೆಲೆಯಲ್ಲಿ ಎಂಟು ಫ್ರಾಂಚೈಸಿಗಳು ತಮ್ಮ ರಿಟೈನ್ಡ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಇನ್ನುಳಿದಂತೆ ಹೊಸದಾಗಿ ಅಖಾಡಕ್ಕೆ ಧುಮುಕಳಿರುವ ಲಕ್ನೌ ಮತ್ತು ಅಹಮದಾಬಾದ್ ತಂಡಗಳು ಇನ್ನಷ್ಟೆ ತಮ್ಮ ತಂಡಕ್ಕೆ ಬೇಕಾದ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.
ಮೂಲಗಳ ಪ್ರಕಾರ ಈ ಎರಡೂ ತಂಡಗಳು ಕ್ಯಾಪ್ಟನ್ ಗಾಗಿ ಹುಡುಕಾಟ ನಡೆಸುತ್ತಿದ್ದು, ಲಖನೌ ಫ್ರಾಂಚೈಸಿ ಕೆ.ಎಲ್.ರಾಹುಲ್ ಅವರನ್ನು ತಮ್ಮ ತಂಡದ ನಾಯಕರನ್ನಾಗಿ ನೇಮಕ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇತ್ತ ಅಹಮದಾಬ್ ಫ್ರಾಂಚೈಸಿ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದ್ದು, ಡೆಲ್ಲಿ ಡ್ಯಾಶರ್ ಶ್ರೇಯಸ್ ಅಯ್ಯರ್ ರತ್ತ ಮುಖ ಮಾಡಿದೆಯಂತೆ.
ಮೆಗಾ ಹರಾಜು ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಉಳಿದ ಆಟಗಾರರನ್ನು ಕೈಬಿಟ್ಟಿವೆ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಶ್ರೇಯಸ್ ಅಯ್ಯರ್ ಅವರನ್ನ ಕೈ ಬಿಟ್ಟಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ಶ್ರೇಯಸ್, ಡೆಲ್ಲಿ ಪರ 2 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಅಲ್ಲದೇ ತಂಡವನ್ನು ಮುನ್ನಡೆಸಿ ಫೈನಲ್ ಹಂತದವರೆಗೂ ಕರೆದುಕೊಂಡು ಹೋಗಿದ್ದರು. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿ ಅಯ್ಯರ್ ಅವರನ್ನ ರಿಟೈಲ್ಡ್ ಮಾಡಿಕೊಂಡಿಲ್ಲ. ಹೀಗಾಗಿ ಅಯ್ಯರ್ ಮೆಗಾ ಹರಾಜಿನಲ್ಲಿ ಭಾಗವಹಿಸಲಿದ್ದು, ಭಾರಿ ಡಿಮ್ಯಾಂಡ್ ಪಡೆದುಕೊಂಡಿದ್ದಾರೆ.
ಜನವರಿಯಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಬಹುತೇಕ ಫ್ರಾಂಚೈಸಿಗಳು ಶ್ರೇಯಸ್ ಅಯ್ಯರ್ ಗೆ ಭಾರಿ ಪೈಪೋಟಿ ನೀಡುವ ಸಾಧ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ನಾಯಕನಿಗಾಗಿ ಹುಡುಕಾಡುತ್ತಿರುವ ಅಹಮದ್ ಬಾದ್, ಬೆಂಗಳೂರು, ಪಂಜಾಬ್ ತಂಡಗಳು ಅಯ್ಯರ್ ಗೆ ಮಣೆ ಹಾಕಲು ಸಜ್ಜಾಗಿವೆ.
ಈ ಮಧ್ಯೆ ಅಹಮದಾಬಾದ್ ಫ್ರಾಂಚೈಸಿಗೆ ಆಕ್ಷನ್ ಪೋಲ್ ನಲ್ಲಿರುವ ಆಟಗಾರರನ್ನು ನೇರವಾಗಿ ಖರೀಸುವ ಅವಕಾಶ ಇರುವುದರಿಂದ ಶ್ರೇಯಸ್ ಅಯ್ಯರ್ ಗೆ ಮಣೆ ಹಾಕಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಅಯ್ಯರ್ ಅಹಮದಾಬಾದ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರಂತೆ. ಈ ಕುರಿತಂತೆ ಅಯ್ಯರ್ ಈಗಾಗಲೇ ಅಹಮದಾಬಾದ್ ಫ್ರಾಂಚೈಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಇನ್ನು ಅಯ್ಯರ್ ಗಾಗಿ ಅಹಮದಾಬಾದ್ ತಂಡ ಬರೋಬ್ಬರಿ 15 ಕೋಟಿ ರೂಪಾಯಿ ಆಫರ್ ನೀಡಿದೆಯಂತೆ.









