ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಗುಜರಾತ್ ವಿರುದ್ಧದ ಪಂದ್ಯದಲ್ಲಿ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶನ ನೀಡಿದರೂ, ಶತಕವನ್ನ ಸ್ವಲ್ಪದರಲ್ಲಿ ತಪ್ಪಿಸಿಕೊಂಡರು. ಆರಂಭದಿಂದಲೇ ಗುಜರಾತ್ ಬೌಲರ್‌ಗಳಿಗೆ ತಿರುಗೇಟು ನೀಡಿದ ಶ್ರೇಯಸ್, ಕೇವಲ 42 ಎಸೆತಗಳಲ್ಲಿ 97 ರನ್* ಹೊಡೆದು “sky is the limit” ಎನ್ನುವಂತೆ ಆರ್ಭಟಿಸಿದರು.
ಮೊದಲ ಶತಕದ ಅವಕಾಶ ತಪ್ಪಿಸಿಕೊಂಡ ಶ್ರೇಯಸ್
ನೇರವಾಗಿ ಶತಕದತ್ತ ದೌಡಾಯಿಸುತ್ತಿದ್ದ ಶ್ರೇಯಸ್, ಸಿಕ್ಕ ಅವಕಾಶವನ್ನು ಉಪಯೋಗಿಸಿ ಕೊಳ್ಳಲಾಗದೆ ತಮ್ಮ ಐಪಿಎಲ್ ವೃತ್ತಿ ಜೀವನದ ಮೊದಲ ಶತಕವನ್ನು ಮಿಸ್ ಮಾಡಿಕೊಂಡರು. ಆದರೆ, ಅವರ ಅಬ್ಬರದ ಬ್ಯಾಟಿಂಗ್ ಪಂಜಾಬ್ ಅಭಿಮಾನಿಗಳಿಗೆ ಪರಮಾನಂದ ನೀಡಿತು.
ಸಿಕ್ಸರ್ ಮಳೆ: 9 ಸಿಕ್ಸರ್, 5 ಬೌಂಡರಿ
ಶ್ರೇಯಸ್ ತಮ್ಮ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿ, ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇದು ಪಂಜಾಬ್ ಕಿಂಗ್ಸ್‌ಗೆ ಭರ್ಜರಿ ಮೊತ್ತ ಕಟ್ಟಿಕೊಡಲು ನೆರವಾಯಿತು.
ಆದರೆ, ಮೂರು ರನ್ ನಲ್ಲಿ ಶತಕ ಮಿಸ್ ಆಗಿರುವುದು ಅಭಿಮಾನಿಗಳಿಗೆ ಹತಾಶೆ ಮೂಡಿಸಿದೆ. ಈಗ ಪಂಜಾಬ್ ಅಭಿಮಾನಿಗಳು ಶ್ರೇಯಸ್ ಅವರಿಂದ ಮುಂದಿನ ಪಂದ್ಯಗಳಲ್ಲಿ ಶತಕ ನಿರೀಕ್ಷಿಸುತ್ತಿದ್ದಾರೆ.