ವೇಗದ ಬೌಲರ್ ಗಳೆಂದರೆ ಶ್ರೇಯಸ್ ಗೆ ಭಯ
ಟೀಂ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ವೇಗದ ಬೌಲರ್ಗಳನ್ನು ಎದುರಿಸಲು ಪರದಾಡುತ್ತಿದ್ದಾರೆ ಎಂದು ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.
ಸ್ಪಿನ್ನರ್ಗಳು ಮತ್ತು ಮಧ್ಯಮ ವೇಗದ ಬೌಲರ್ಗಳಿಗೆ ಅಯ್ಯರ್ ಅದ್ಭುತವಾಗಿ ಆಡುತ್ತಿದ್ದಾರೆ ಎಂದು ಹೇಳಿದರು.
ತವರಿನಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಅಬ್ಬರಿಸಿದ ಅಯ್ಯರ್, ಸದ್ಯ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿಲ್ಲ.
ಸರಣಿಯಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿರುವ ಅಯ್ಯರ್ 94 ರನ್ ಗಳಿಸಿದ್ದಾರೆ.

ಅಯ್ಯರ್ ಪೇಸ್ ಬೌಲಿಂಗ್ ಆಡಲು ಕಷ್ಟಪಡುತ್ತಿದ್ದಾರೆ. ಈ ಸರಣಿಯಲ್ಲಿ ಮಾತ್ರವಲ್ಲದೆ ಕಳೆದ ಕೆಲವು ಪಂದ್ಯಗಳಲ್ಲಿಯೂ ಅವರು ವೇಗದ ಬೌಲರ್ಗಳಿಗೆ ವಿಕೆಟ್ ಒಪ್ಪಿಸುತ್ತಿದ್ದಾರೆ.
ಐಪಿಎಲ್ನಲ್ಲಿ ಅವರು 140 ಕಿಮೀ ಹೆಚ್ಚು ವೇಗದಲ್ಲಿ ಬರುವ ಚೆಂಡುಗಳನ್ನು ಆಡಿದಾಗ ಅವರ ಸ್ಟ್ರೈಕ್ ರೇಟ್ ಕಡಿಮೆ ಆಗುತ್ತದೆ.
ಆದಾಗ್ಯೂ, ಅವರು ಸ್ಪಿನ್ನರ್ಗಳಿಗೆ ಮತ್ತು 140ಕ್ಕೂ ಕಡಿಮೆ ವೇಗದಲ್ಲಿ ಬರುವ ಎಸೆತಗಳಿಗೆ ಚೆನ್ನಾಗಿ ಉತ್ತರ ನೀಡುತ್ತಾರೆ.
ಆದ್ರೆ ವೇಗದ ಬೌಲರ್ ಗಳ ಎದುರು ಆಡಲು ಅವರು ಪರದಾಟ ನಡೆಸುತ್ತಿದ್ದಾರೆ ಎಂದು ಪಠಾಣ್ ಹೇಳಿದ್ದಾರೆ.








