Shreyas iyer | ಆತ ಅದ್ಭುತ ಕ್ರಿಕೆಟರ್.. ಬ್ಯಾಟ್ ನಿಂದಲೇ ಉತ್ತರ ಕೊಟ್ಟ
ಯುವ ಬ್ಯಾಟರ್ ಶ್ರೇಯಸ್ ಅಯ್ಯರ್ ಅದ್ಭುತವಾದ ಬ್ಯಾಟ್ಸ್ ಮೆನ್ .. ಟೀಕೆ ಮಾಡುವವರಿಗೆ ಬ್ಯಾಟ್ ನಿಂದಲೇ ಉತ್ತರ ಕೊಟ್ಟಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಅಯ್ಯರ್ 28 ಎಸೆತಗಳಲ್ಲಿ 57 ರನ್ ಗಳನ್ನು ಚಚ್ಚಿದ್ರು. ಹೀಗಾಗಿ ಅವರ ಮೇಲೆ ಪ್ರಸಂಶೆಗಳ ಸುರಿಮಳೆಯಾಗುತ್ತಿದ್ದು, ಇದೀಗ ಇರ್ಫಾನ್ ಮೆಚ್ಚುಗ ವ್ಯಕ್ತಪಡಿಸಿದ್ದಾರೆ.
‘ಅಯ್ಯರ್ ಯಾವುದೇ ಸ್ಥಾನದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಆತ ಫಾರ್ಮ್‌ನಲ್ಲಿರುವಾಗ .. ಆಟವನ್ನು ನೋಡಿ ಆನಂದಿಸಬಹುದು.
ಅವರು ಕ್ರೀಸ್‌ನಲ್ಲಿ ಒಂದು ಸ್ಥಳದಲ್ಲಿ ಉಳಿಯುವುದಿಲ್ಲ. ಆದ್ರೂ ಬ್ಯಾಲೆನ್ಸ್ ಆಗಿ ಬ್ಯಾಟ್ ಬೀಸೋದು ಅವರಿಗೆ ಮಾತ್ರ ಸಾಧ್ಯವಾಗುತ್ತದೆ.
ಈ ಪಂದ್ಯದಲ್ಲಿ ಚೆಂಡನ್ನು ನೋಡದೆ ಅಯ್ಯರ್ ಬಾರಿಸಿದ ಸಿಕ್ಸರ್ ನನಗೆ ತುಂಬಾ ಇಷ್ಟವಾಯಿತು.
ಚಮೀರ ಮತ್ತು ಕರುಣರತ್ನೆ ಬೌಲಿಂಗ್‌ನಲ್ಲಿ ನಿಧಾನಗತಿಯ ಎಸೆತಗಳಿಗೆ ಅವರು ಬಾರಿಸಿದ ಸಿಕ್ಸರ್‌ಗಳೂ ಅತ್ಯುತ್ತಮವಾಗಿದ್ದವು.
ಟೀಕೆಗಳಿಗೆ ಅಯ್ಯರ್ ಬ್ಯಾಟ್ ಮೂಲಕ ಉತ್ತರಿಸಿದ್ದಾರೆ‘ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಇದುವರೆಗೆ 34 ಟಿ20 ಪಂದ್ಯಗಳನ್ನಾಡಿರುವ ಅಯ್ಯರ್ 662 ರನ್ ಗಳಿಸಿದ್ದಾರೆ.









