ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಂಹ – ಶ್ರೇಯಸ್ಸ್ ಅಯ್ಯರ್
ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಶ್ರೇಯಸ್ ಅಯ್ಯರ್ ಅವರು ನಾಯಕ ವಿರಾಟ್ ಕೊಹ್ಲಿಯವರ ಕ್ರಿಕೆಟ್ ಮೇಲಿನ ಬದ್ಧತೆಗೆ ಸಲಾಂ ಅಂದಿದ್ದಾರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್‍ಸ್ಟಾಗ್ರಾಮ್ ಲೈವ್ ಕಾರ್ಯಕ್ರಮದಲ್ಲಿ ಅಯ್ಯರ್ ಅವರು, ಕೊಹ್ಲಿಯವರ ಸಾಮಥ್ರ್ಯ, ಬದ್ಧತೆ, ಆಕ್ರಮಣಕಾರಿ ಪ್ರವೃತ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಪಟ್ಟು ಬಿಡದ ಕ್ರಿಕೆಟಿಗ. ಕೊಹ್ಲಿ ಒಬ್ಬ ಅದ್ಭುತ ಬ್ಯಾಟ್ಸ್‍ಮೆನ್. ಸ್ಪರ್ಧಾತ್ಮಕ ನಾಯಕ ಹಾಗೂ ಮೈದಾನದಲ್ಲಿ ಸದಾ ಆಕ್ರಮಣಕಾರಿ ಪ್ರವೃತ್ತಿಯನ್ನು ಹೊಂದಿರುವ ಕ್ರಿಕೆಟಿಗ. ಹಾಗೇ ಪ್ರತಿ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಗೆಲುವಿಗಾಗಿ ಪಟ್ಟು ಹಿಡಿಯುತ್ತಾರೆ. ಸೋಲನ್ನು ಯಾವತ್ತೂ ಒಪ್ಪಿಕೊಳ್ಳಲು ಅವರು ತಯಾರು ಇರುವುದಿಲ್ಲ. ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಗುಣವನ್ನು ಹೊಂದಿದ್ದಾರೆ. ಸದಾ ಹೊಸತನವನ್ನು ಕಲಿಯುತ್ತಿರುತ್ತಾರೆ. ಹೀಗಾಗಿಯೇ ಕೊಹ್ಲಿ ಒಬ್ಬ ಉತ್ತಮ ಕ್ರಿಕೆಟಿಗನಾಗಿದ್ದು, ಅತ್ಯುತ್ತಮ ನಾಯಕನಾಗಿ ಹೊರಹೊಮ್ಮಿರುವುದು ಅಂತ ಶ್ರೇಯಸ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ವಿರಾಟ್ ಕೊಹ್ಲಿಯವರಿಂದ ಮೆಚ್ಚುಗೆ ಪಡೆದಾಗ ಆಗುವಂತಹ ಭಾವನೆಗಳೇ ಬೇರೆ. ಅವರೊಬ್ಬ ನಿಜವಾದ ನಾಯಕ. ಜೊತೆಗೆ ಮಾದರಿ ಕ್ರಿಕೆಟಿಗ ಎಂದು ಅಯ್ಯರ್
ಬಣ್ಣಿಸಿದ್ದಾರೆ. ಕ್ರಿಕೆಟ್ ಆಟದ ಮೇಲಿನ ಹಸಿವಿಗೆ ಕೊನೆಯೇ ಇಲ್ಲ. ಪ್ರತಿ ಬಾರಿ ಮೈದಾನಕ್ಕಿಳಿದಾಗ ತನ್ನ ಪ್ರಥಮ ಪಂದ್ಯ ಎಂಬಂತೆ ಹೊರಡುತ್ತಾರೆ. ಅವರಿಂದ ಕಲಿಯುವುದು ತುಂಬಾನೇ ಇದೆ. ವಿರಾಟ್ ಕೊಹ್ಲಿ ಸಿಂಹ ಅಂತ ಹೇಳ್ತಾರೆ ಅಯ್ಯರ್..
ಇನ್ನು ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕವನ್ನು ನಾನು ಭದ್ರಪಡಿಸುತ್ತಿದ್ದೇನೆ. ಆ ಸ್ಥಾನದ ಬಗ್ಗೆ ಯಾರು ಕೂಡ ಬೊಟ್ಟು ಮಾಡಿ ಪ್ರಶ್ನೆ ಮಾಡುವಂತಿಲ್ಲ ಎಂದು ಆತ್ಮವಿಶ್ವಾಸದಿಂದಲೇ ಹೇಳಿದ್ದರು. ಈಗಾಗಲೇ 18 ಏಕದಿನ ಪಂದ್ಯಗಳನ್ನು ಆಡಿರುವ ಅಯ್ಯರ್ 9 ಅರ್ಧಶತಕ ಹಾಗೂ ಒಂದು ಶತಕವನ್ನು ದಾಖಲಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರಸ್ತಂಭವಾಗಿ ಟೀಮ್ ಇಂಡಿಯಾದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.








