ರೋಹಿತ್.. ಧವನ್ ಸಾಲಿಗೆ ಸೇರಿದ ಅಯ್ಯರ್
ಟೀಂ ಇಂಡಿಯಾದ ಶೈನಿಂಗ್ ಸ್ಟಾರ್ ಶ್ರೇಯಸ್ ಅಯ್ಯರ್ ತನ್ನ ಪಾದಾರ್ಪಣೆ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.
ಭಾರತದ ಪರ ಡೆಬ್ಯೂ ಮ್ಯಾಚ್ ನಲ್ಲಿಯೇ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಟೀಂ ಇಂಡಿಯಾದ ಪರ ಈ ಸಾಧನೆ ಮಾಡಿದ ಮೂರನೇ ಆಟಗಾರ ಶ್ರೇಯಸ್ ಅಯ್ಯರ್.
ನ್ಯೂಜಿಲೆಂಡ್ ವಿರುದ್ಧ ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದರು.
ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ತಂಡಕ್ಕೆ ಆಸರೆಯಾದ ಅಯ್ಯರ್ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿ ಮಿಂಚಿದರು.
ಎರಡನೇ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿದರು. ಅಯ್ಯರ್ ಮೊದಲ ಇನ್ನಿಂಗ್ಸ್ ನಲ್ಲಿ 105 ರನ್, ಎರಡನೇ ಇನ್ನಿಗ್ಸ್‍ನಲ್ಲಿ 65 ರನ್ ಗಳಿಸಿದ್ದಾರೆ.
ಆ ಮೂಲಕ ಪಂದ್ಯದ ಎರಡು ಇನ್ನಿಗ್ಸ್‍ಗಳು ಸೇರಿ ಅಯ್ಯರ್ 170 ರನ್ ಗಳಿಸಿದ್ದಾರೆ.
ಅಂದಹಾಗೆ ಭಾರತದ ಪರ ಡೆಬ್ಯೂ ಮ್ಯಾಚ್ ನಲ್ಲಿ ಅತ್ಯಧಿಕ ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದಾರೆ.
ಅವರು ಮೊದಲ ಪಂದ್ಯದಲ್ಲಿ 187 ರನ್ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿ 177 ರನ್‍ಗಳೊಂದಿಗೆ ರೋಹಿತ್ ಶರ್ಮಾ ಇದ್ದಾರೆ.