ಡೆಬ್ಯೂ ಮ್ಯಾಚ್ ನಲ್ಲಿ ಶ್ರೇಯಸ್ ಶತಕ ಸಂಭ್ರಮ
ಡೆಬ್ಯೂ ಮ್ಯಾಚ್ ನಲ್ಲಿ ಶತಕ ಸಿಡಿಸಿದ ಭಾರತದ 10ನೇ ಬ್ಯಾಟರ್
ಪಾದಾರ್ಪಣೆ ಪಂದ್ಯದಲ್ಲಿ ಅಯ್ಯರ್ ಅಬ್ಬರ.. ಭಾರತಕ್ಕೆ ಶ್ರೇಯಸ್ಸು
ಟೀಂ ಇಂಡಿಯಾದ ಬ್ಯಾಟರ್ ಶ್ರೇಯಸ್ ಅಯ್ಯರ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿದ್ದಾರೆ.
ಇದರಿಂದಿಗೆ ಭಾರತದ ಪರ ಪಾದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ 10ನೇ ಬ್ಯಾಟರ್ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಕಾನ್ಪುರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಈ ಸಾಧನೆ ಮಾಡಿದ್ದಾರೆ.
ನಿನ್ನೆ 75 ರನ್ ಗಳಿಸಿ ಇಂದಿಗೆ ಕ್ರೀಸ್ ಕಾಯ್ದುಕೊಂಡಿದ್ದ ಅಯ್ಯರ್, ಇಂದು ಆರಂಭದಲ್ಲೇ ಕಿವೀಸ್ ಬೌಲರ್ ಗಳ ಬೆಂಡೆತ್ತಿದರು.
ಒಂದು ಕಡೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಬಿದ್ದರೂ ತಲೆಕೆಡಿಸಿಕೊಳ್ಳದ ಶ್ರೇಯಸ್ ತಮ್ಮ ಚೊಚ್ಚಲ ಶತಕ ಸಿಡಿಸಿ ಮಿಂಚಿದರು.
ಸದ್ಯ 170 ಎಸೆತಗಳನ್ನ ಎದುರಿಸಿರೋ ಶ್ರೇಯಸ್ 105 ರನ್ ಗಳಿಸಿದ್ದಾರೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 305 ರನ್ ಗಳಿಸಿದೆ.