ಮುಗಿದ ರಾಮುಲು ವನವಾಸ.. ಕಾರಜೋಳಗೆ ಜಾಕ್ ಪಾಟ್.. ಸಾಮ್ರಾಟರಿಗೆ ಪಟ್ಟ..
ಬೆಂಗಳೂರು : ರಾಜ್ಯದಲ್ಲಿ ಬಿಜೆಪಿಯ ಹೊಸ ಪಯಣ ಆರಂಭವಾಗಿದೆ. ಇಷ್ಟು ದಿನ ಪಕ್ಷದ ಬೆನ್ನೆಲುಬಾಗಿದ್ದ ಬಿಎಸ್ ಯಡಿಯೂರಪ್ಪ ಆಯಕಟ್ಟು ಸ್ಥಾನದಿಂದ ಕಳೆಗಿಳಿದಿದ್ದಾರೆ. ಇದನ್ನು ಸರಿದೂಗಿಸಿಕೊಂಡು ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಹೈಕಮಾಂಡ್ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಬಿಎಸ್ ವೈ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಬಸವರಾಜ್ ಬೊಮ್ಮಾಯಿ ಉತ್ತರವಾಗಿದ್ದು, ನಿರೀಕ್ಷತೆಯಂತೆ ಲಿಂಗಾಯತ ಸಮುದಾಯದವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಆದರೆ, ಉಪ ಮುಖ್ಯಮಂತ್ರಿಯಲ್ಲಿ ಒಂದಿಷ್ಟು ಪ್ರಯೋಗ ಮಾಡಲಾಗಿದೆ.
ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಾತಿ, ಮತ, ಪಂಥ, ಪ್ರಾದೇಶಿಕತೆ, ಸಂಘಟನೆ, ಅನುಭವ ಎಲ್ಲವನ್ನು ಅಳೆದು ತೂಗಿ ಹೈಕಮಾಂಡ್, ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಮೂರು ಹೆಸರುಗಳನ್ನು ಅಂತಿಮಗೊಳಿದೆ. ಈ ಹಿಂದೆ ಡಿಸಿಎಂ ಆಗಿದ್ದ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಹುದ್ದೆ ಒಲಿದು ಬಂದಿದೆ. ಇತ್ತ ಒಕ್ಕಲಿಗ ಸಮುದಾಯದ ಡಾ. ಸಿ.ಎನ್ ಅಶ್ವಥ ನಾರಾಯಣ ಅವರು ತಮ್ಮ ಸ್ಥಾನವನ್ನು ಅದೇ ಸಮುದಾಯದ ಅಶೋಕ ಅವರಿಗೆ ಬಿಟ್ಟುಕೊಡಲಿದ್ದಾರೆ.
ಮುಖ್ಯವಾಗಿ ಬಿ. ಶ್ರೀರಾಮುಲು ಅವರಿಗೆ ಡಿಸಿಎಂ ಹುದ್ದೆ ಒಲಿದು ಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಲಾಗುವುದು ಎಂದು ಪಕ್ಷದ ವರಿಷ್ಠರೇ ಭರವಸೆ ನೀಡಿದ್ದರು. ಆದ್ರೆ ಅದು ಆಗಲಿಲ್ಲ. ಬಿಎಸ್ ವೈ ಅಧಿಕಾರ ವಹಿಸಿಕೊಂಡ ಬಳಿಕವೂ ರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಡಗಳು ಬಂದವು. ಸ್ವತಃ ರಾಮುಲು ಅವರೇ ಡಿಸಿಎಂ ಆಗುವ ಆಸೆಯನ್ನು ಹೊರಹಾಕಿದ್ದರು.