ಯೆ
ಚಿತ್ರದುರ್ಗ: ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಬ್ಲಾಕಿಂಗ್ ಸಂಬಂಧ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರಕ್ಕೆ ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಬಹಳಷ್ಟು ಜನರು ಸ್ವಾರ್ಥಿಗಳು ಇರಬಹುದು ಇಲ್ಲವೆಂದು ಹೇಳಲ್ಲ. ಕೆಲವೊಂದು ಸಾರಿ ಕೆಟ್ಟ ಆಸೆಯಿಂದ ವ್ಯಾಪಾರಿಕರಣ ಮಾಡುತ್ತಾರೆ. ವ್ಯಾಪಾರದ ಜೊತೆಗೆ ವೈಯಕ್ತಿಕ ಹಿತಾಸಕ್ತಿಗೆ ಲಾಭ ನೋಡಿಕೊಳ್ಳುತ್ತಾರೆ. ಜನರು ಸಾವಿನಲ್ಲೂ ಕೂಡಾ ಲಾಭ ಪಡೆದುಕೊಳ್ಳುವವರಿದ್ದಾರೆ. ಮೊಸರಿನಲ್ಲಿ ಕಲ್ಲು ಹುಡುಕಿದಂತೆ . ಇದು ಅಲ್ಲೆಲ್ಲೊ ದೊಡ್ಡಮಟ್ಟದಲ್ಲಿ ನಡೆಯಿತ್ತಿರಬೇಕು ಜಿಲ್ಲೆಗಳಲ್ಲಿ ನಡೆಯುತ್ತಿಲ್ಲ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಸಚಿವರು ಬೆಂಗಳೂರಲ್ಲಿ ಈ ರೀತಿಯ ಘಟನೆ ನಡೆದದ್ದರಿಂದ ತೇಜಸ್ವಿ ಸೂರ್ಯ ಹೇಳಿಕೆ ಕೊಟ್ಟಿದ್ದಾರೆ. ಇಡೀ ರಾಜ್ಯವನ್ನ ಸುತ್ತುತ್ತಿದ್ದೇನೆ ಆ ರೀತಿ ಕಂಡು ಬಂದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಕೋವಿಡ್ 2ನೇ ಅಲೆ ವೇಳೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ನಡೆಯುತ್ತಿರುವ ಾರೋಪಗಳು ಬಲವಾಗಿ ಕೇಳಿಬರುತ್ತಿದೆ. ದಿನೇ ದಿನೇ ಈ ಆರೋಪಗಳು ಹೆಚ್ಚಾಗ್ತಲೇ ಇದ್ದು ಇದೇ ವಿಚಾರವಾಗಿ ಮಾತನಾಡಿದ್ದ ತೇಜಸ್ವಿ ಸೂರ್ಯ ಹೇಳಿಕೆಗೆ ಶ್ರೀರಾಮುಲು ಅವರು ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಸರ್ಕಾರ ICUನಲ್ಲಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಶ್ರೀರಾಮುಲು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅಧಿಕಾರ ಕಳೆದುಕೊಂಡಿದ್ದಾರೆ. ನಮ್ಮ ಸಿಎಂ ಬಿಎಸ್ ವೈ ವಿರೋಧ ಪಕ್ಷದವರನ್ನ ಕರೆದು ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ. ಸಮಸ್ಯೆ ಪರಿಹಾರ, ಲಾಕ್ ಡೌನ್ ಕುರಿತು ಸಲಹೆ ಕೇಳುತ್ತಿದ್ದೇವೆ. ಅವರು ನಮ್ಮ ಹತ್ತಿರ ಬಂದಾಗ ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ ಬೆಂಬಲ ನೀಡುತ್ತೇವೆ ಅನ್ನುತ್ತಾರೆ. ರಾಜಕೀಯ ಲಾಭಕ್ಕಾಗಿ ಸರ್ಕಾರ ICU ನಲ್ಲಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಫೈಲ್ಯೂರ್ ಆಗಿದೆ ಕೆಲಸ ನಿಭಾಯಿಸಿಲ್ಲ ಎಂಬ ಹೇಳಿಕೆಗಳು ಪೊಲಿಟಿಕಲ್ ಸ್ಟಂಟ್. ರಾಜಕಾರಣಕ್ಕೆ ಲಾಭ ಪಡೆದುಕೊಳ್ಳೋಕೆ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದಿದ್ದಾರೆ.