ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು , ರಾಜಕೀಯ ಸಮಸ್ಯೆಗಳಿಂದ ಜನರು ಕಂಗೆಟ್ಟು ಹೋಗಿದ್ದಾರೆ.. ಪ್ರತಿಭಟನಾಕರರ ಕಿಚ್ಚಿನಿಂದ ಲಂಕಾದಹನವಾಗಿದ್ದು , ಪರಿಸ್ಥಿತಿ ನಿಯಂತ್ರಣಕ್ಕೆ ಭದ್ರತಾ ಸಿಬ್ಬಂದಿ ಹರಸಾಹಸ ಪಡುವ ಪರಿಸ್ಥಿತಿ ಒಂದೆಡೆಯಾದ್ರೆ , ಆರ್ಥಿಕ ಸಂಕಷ್ಟದಿಂದಾಗಿ ಜನರು ಒಂದ್ ಹೊತ್ತಿನ ಊಟಕ್ಕೂ ಪರದಾಡ್ತಿದ್ದಾರೆ..
ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವ ಮೂಲಕ ಸ್ಥಿರತೆ ಮತ್ತು ಆರ್ಥಿಕ ಚೇತರಿಕೆ ಸಾಧಿಸಬೇಕೆಂಬ ಪ್ರಜೆಗಳ ಬಯಕೆಗೆ ಭಾರತ ಬೆಂಬಲವಾಗಿ ನಿಲ್ಲುತ್ತದೆ ಎಂದು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಲಂಕಾದ ನೂತನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರಿಗೆ ಅಭಿನಂದನೆ ಸಲ್ಲಿಸಿರುವ ಮೋದಿ ಅವರು ‘ ಭಾರತ ಮತ್ತು ಶ್ರೀಲಂಕಾ ನಡುವೆ ಹಲವಾರು ವರ್ಷಗಳ ನಿಕಟ ಬಾಂಧವ್ಯ ಇದ್ದು, ಎರಡೂ ದೇಶಗಳ ಜನರಿಗೆ ಪರಸ್ಪರ ಉಪಯೋಗವಾಗುವಂತಹ ಮತ್ತು ಸ್ನೇಹವನ್ನು ಬಲಪಡಿಸುವಂತಹ ನಿಟ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು ಪ್ರಧಾನಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾಗಿ ವರದಿಯಾಗಿದೆ..








